ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ)ಮುದ್ರಮಕ್ಕಿ ಶಿರೂರು ಇದರ 26ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡೋತ್ಸವ ಕಾರ್ಯಕ್ರಮ ಮುದ್ರಮಕ್ಕಿಯಲ್ಲಿ ನಡೆಯಿತು. ದೈಹಿಕ  ಶಿಕ್ಷಕರಾದ ಸತೀಶ್ ಬೈಂದೂರು ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ.ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ ಎಂದರು.

ಶ್ರೀ ಮಹಾಸತಿ ಯುವಕ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯ ಲಿಂಗಪ್ಪ ಆರ್ ಮೇಸ್ತ, ಶಿರೂರು ಗ್ರಾ.ಪಂ ಸಿಬ್ಬಂದಿ ಶಂಕರ ಬಿಲ್ಲವ, ತಿಮ್ಮಪ್ಪ ಪೂಜಾರಿ ಹಾಜರಿದ್ದರು.

ಸಂಘದ ಕಾರ್ಯದರ್ಶಿ ಸಂಜಯ್ ಸ್ವಾಗತಿಸಿದರು.ಖಜಾಂಚಿ ವೆಂಕಟೇಶ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.ಜೊತೆ ಕಾರ್ಯದರ್ಶಿ ಪವನ್ ವಂದಿಸಿದರು.

 

Leave a Reply

Your email address will not be published. Required fields are marked *

twenty − twelve =