ಬೈಂದೂರು: ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 121 ದಿನ ಪೂರೈಸಿದೆ.ರೈತರಿಗೆ ನ್ಯಾಯ ನೀಡಲು ಸರಕಾರದ ಮಟ್ಟದಲ್ಲಿ ಸಚಿವರು ಸಮ್ಮತಿ ನೀಡಿದರು ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ.ಈ ಕುರಿತು ಈ ಜಿಲ್ಲೆಯ ನಾಯಕರು ಒಮ್ಮತದಿಂದ ರೈತರ ಪರ ಧ್ವನಿ ಎತ್ತಬೇಕು ಮರಳುಗಾರಿಕೆಯಲ್ಲಿ ರಾಜಕೀಯ ಮರೆತು ಹೊಂದಾಣಿಕೆ ಮಾಡಿಕೊಳ್ಳುವ ನಾಯಕರು ರೈತರಿಗೆ ನ್ಯಾಯ ಕೊಡಲು ಮಾತ್ರ ಒಗ್ಗಟ್ಟು ತೋರಿಸುತ್ತಿಲ್ಲ.ರೈತರ ವಿಚಾರದಲ್ಲಿ ಅನ್ಯಾಯ ಮಾಡಿದರೆ ನಿಮ್ಮ ಭವಿಷ್ಯ ನಿರ್ನಾಮವಾಗುತ್ತದೆ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಮಂಗಳವಾರ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆದ ರೈತರ ಹೋರಾಟ ಮತ್ತು ಬ್ರಹತ್ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆ.ಆರ್.ಎಸ್ ಬೆಂಗಳೂರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಮಾತನಾಡಿ ಉಡುಪಿ ಜಿಲ್ಲಾಡಳಿತ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಈ ಜಿಲ್ಲೆಯ ಜಿಲ್ಲಾಧಿಕಾರಿ ನೂರು ದಿವಸ ರೈತರು ಬೀದಿಯಲ್ಲಿ ಕುಳಿತರು ಕನಿಷ್ಠ ಮಾತನಾಡಿಸುವ ಸೌಜನ್ಯವಿಲ್ಲದೆ ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದಾರೆ.ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ರೈತರು ನ್ಯಾಯಕ್ಕಾಗಿ ಆಗ್ರಹಿಸಿದರೆ ಜಿಲ್ಲಾಡಳಿತ ಮತ್ತು ರಾಜಕೀಯ ವ್ಯವಸ್ಥೆ ಬೈಂದೂರು ಉತ್ಸವದ ಸಿದ್ದತೆಯಲ್ಲಿರುವುದು ಇವರ ಮಾನಸಿಕ ದಿವಾಳಿತನವನ್ನು ಬಿಂಬಿಸುತ್ತದೆ.ರೈತರ ವಿಚಾರದಲ್ಲಿ ಅನ್ಯಾಯವಾದರೆ ಕೆ.ಎಸ್.ಆರ್ ಪಕ್ಷ ರಾಜ್ಯಮಟ್ಟದ ಸದಸ್ಯರು ರೈತರ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂಧಿಸುವುದು ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ ಎಂದರು.













ಖಂಬದಕೋಣೆ ರೈತರ ಸೇವಾ ಸಹಾಕರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ,,ಬೈಂದೂರು ಗ್ರಾ.ಪಂ ಮಾಜಿ ಸದಸ್ಯ ಗಣೇಶ ಪೂಜಾರಿ,ನಾಗಪ್ಪ ಮರಾಠಿ,ಲಿಮೋನ್ ಬೈಂದೂರು,ಪದ್ಮಾಕ್ಷ ಗೋಳಿಬೇರು,ಹಿರಿಯರಾದ ಹೆರಿಯಣ್ಣ ಪೂಜಾರಿ ಗೋಳಿಬೇರು, ಸುಭಾಷ್ ಗಂಗನಾಡು,ಕೇಶವ ಪೂಜಾರಿ ಅಂತಾರ್,ರೈತ ಮುಖಂಡರು,ಗ್ರಾಮೀಣ ಭಾಗದ ರೈತರು ಹಾಗೂ ಆರ್.ಎಸ್ ಬೆಂಗಳೂರು ಪಕ್ಷದ ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕುಆಡಳಿತ ಸೌಧದದಿಂದ ಕಿರಿಮಂಜೇಶ್ವರದ ವರೆಗೆ ಬೈಕ್ ಜಾಥಾ ನಡೆಸಲಾಯಿತು.ಜಾಥಾದಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವರದಿ/ಚಿತ್ರ: ಗಿರಿ ಶಿರೂರು