ಶಿರೂರು: ಸ್ಥಳೀಯವಾಗಿ ಹತ್ತಾರು ಜನರಿಗೆ ಅವಕಾಶವಿದ್ದರು ಕೂಡ ಹೊರ ರಾಜ್ಯದವರು ಕನ್ನಡಿಗರ ಮೇಲಿನ ದಬ್ಬಾಳಿಕೆ ಸಲ್ಲದು.ಸ್ಥಳೀಯರು ಸಣ್ಣ ಒತ್ತುವರಿ ನಡೆಸಿದರೆ ತೆರವುಗೊಳಿಸುವ ಇಲಾಖೆ ಟೆಂಡರ್ ನಿಯಮ ಉಲ್ಲಂಘಿಸಿ ಶೆಡ್ ನಿರ್ಮಿಸಿದರು ಸಹ ಯಾರು ಕೂಡ ಇಲ್ಲಿಯವರೆಗೂ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಸ್ಥಳೀಯವಾಗಿ ವ್ಯವಹಾರ ನಡೆಸುವ ಸಣ್ಣಪುಟ್ಟ ಅಂಗಡಿ, ಹೋಟೆಲ್‌ನವರಿಗೆ ತೊಂದರೆಯಾಗುತ್ತಿದೆ.ಇದಲ್ಲದೆ ಹಿಂದಿ ಭಾಷೆ ಮಾತನಾಡುವ ಕ್ಯಾಂಟಿನ್ ಸಿಬ್ಬಂದಿಗಳು ಸ್ಥಳೀಯರನ್ನು ನಿಂಧಿಸಿ ದಪ೯ದ ನಡವಳಿಕೆ ನಡೆಸುವುದು ಖಂಡನೀಯ.ಸ್ಥಳೀಯ ಕನ್ನಡಿಗರಿಗೆ ಅನ್ಯಾಯವಾದರೆ ಸಹಿಸಲಾರೆವು ಎಂದು ಕನ್ನಡಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಬಾಸ್ಕರ ಪಟಗಾರ್ ಕುಮಟಾ ಹೇಳಿದರು ಅವರು ಸೋಮವಾರ ಸಂಜೆ ಶಿರೂರು ಟೋಲ್‌ಗೇಟ್ ಬಳಿ ಸಾರ್ವಜನಿಕರ ಮತ್ತು ಸ್ಥಳೀಯರ ಪರವಾಗಿ ಮನವಿ ನೀಡಿ ಮಾತನಾಡಿ ಶಿರೂರಿನ ಟೋಲ್‌ಗೇಟ್ ಕ್ಯಾಂಟಿನ್ ಹೈದ್ರಾಬಾದ್ ಮೂಲದ ಸಿಬಂದಿಗಳು ಸ್ಥಳೀಯರಿಗೆ ದರ್ಪದಿಂದ ವರ್ತಿಸುತ್ತಿದ್ದಾರೆ.ಮಾತ್ರವಲ್ಲದೆ ನಮಗೆ ಲೋಕಲ್ ಅಗತ್ಯ ಇಲ್ಲ ಅನ್ನುತ್ತಾರೆ.ಎರಡು ದಿವಸದ ಹಿಂದೆ ಹೊನ್ನಾವರದ ಪ್ರಯಾಣಿಕರ ಜೊತೆ ಕೂಡ ದರ್ಪದಿಂದ ವರ್ತಿಸಿದ್ದರು.ಮಾತ್ರವಲ್ಲದೆ ಟೋಲ್‌ಗೇಟ್‌ನಲ್ಲಿ ದುಬಾರಿ ದರ ವಿಧಿಸಬಾರದು.ಆದರೆ 20 ರೂಪಾಯಿ ನೀರಿನ ಬಾಟಲಿಗೆ 25 ರೂಪಾಯಿ ವಸೂಲಿ ಮಾಡುವುದು ಹಗಲು ದರೋಡೆ ಮಾಡಿದಂತೆ.ನಾವು ಹೆದ್ದಾರಿಯಲ್ಲಿ ತಿರುಗುತ್ತೇವೋ ಇಲ್ಲಾ ವಿಮಾನದಲ್ಲಿ ತಿರುಗುತ್ತಿದ್ದೇವೋ ಎಂದು ತಿಳಿಯುತ್ತಿಲ್ಲ.ಹೀಗಾಗಿ ಒಂದು ವಾರದ ಒಳಗೆ ಸ್ಥಳೀಯರ ಮನವಿಗೆ ಸ್ಪಂಧಿಸದಿದ್ದರೆ ಶೀಘ್ರದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತೇವೆ ಎಂದರು.
ಕ್ಯಾಂಟಿನ್‌ನಲ್ಲಿ ನಡೆದಿದ್ದೇನು: ಶಿರೂರು ಟೋಲ್‌ಗೇಟ್ ಬಳಿಯ ಹೈವೆನೆಸ್ಟ್ ಮಿನಿ ಕ್ಯಾಂಟಿನ್‌ಗಳು ಹೈದ್ರಾಬಾದ್ ಮೂಲದ ವ್ಯಕ್ತಿ ದುಬಾರಿ ಬಾಡಿಗೆಗೆ ಟೆಂಡರ್ ಪಡದಿದ್ದರು.ಕಳೆದ ತಿಂಗಳು ಕ್ಯಾಂಟಿನ್ ಆರಂಭವಾದ ಬಳಿಕ ಪ್ರತಿ ವಸ್ತುಗಳು ದುಪಟ್ಟು ಬೆಲೆ ನಿಗಧಿ ಮಾಡಿದ್ದು ಹೆದ್ದಾರಿ ಪ್ರಯಾಣಿಕರ ಕಂಗಣ್ಣಿಗೆ ಗುರಿಯಾಗಿತ್ತು.ಈ ಕುರಿತು ಪ್ರಶ್ನಿಸಿದಕ್ಕೆ ವಾಹನ ಚಾಲಕರಿಗೆ ನಮಗೆ ಲೋಕಲ್ ಅವಶ್ಯಕತೆಯಿಲ್ಲ ಟೂರಿಸ್ಟ್ ಮಾತ್ರ ಸಾಕು ಎಂದು ದರ್ಪದ ಉತ್ತರ ನೀಡಿದ್ದರು.ಮಾತ್ರವಲ್ಲದೆ ಹಿಂದಿಯಲ್ಲಿ ಮಾತ್ರ ಮಾತನಾಡಬೇಕು ಎನ್ನುವ ಸಿಬ್ಬಂದಿಗಳ ವರ್ತನೆ ಸ್ಥಳೀಯರನ್ನು ರೊಚ್ಚಿಗೆಬ್ಬಿಸಿತ್ತು.ಈ ಅನುಭವ ಭಟ್ಕಳ, ಹೊನ್ನಾವರ,ಉತ್ತರಕನ್ನಡದ ಪ್ರಯಾಣಿಕರಿಗೂ ಆಗಿದ್ದು.ಇಂದು ಸ್ಥಳೀಯ ವಾಹನ ಮಾಲಕರು,ಮುಖಂಡರು,ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರುಗಳು,ಕನ್ನಡ ಸಂಘದ ಮುಂದಾಳತ್ವದಲ್ಲಿ ಶಿರೂರು ಟೋಲ್‌ಗೇಟ್ ಎದುರು ಜಮಾಯಿಸಿ ಒಂದು ವಾರದ ಗಡುವು ನೀಡಿ ಕ್ಯಾಂಟಿನ್ ಅನಧೀಕೃತ ಒತ್ತುವರಿ ತೆರವುಗೊಳಿಸಬೇಕು.ಕ್ಯಾಂಟಿನ್ ಸಿಬ್ಬಂದಿಗಳು ಸೌಜನ್ಯದಿಂದ ನಡೆದುಕೊಳ್ಳಬೇಕು ಮಾತ್ರವಲ್ಲದೆ ಪ್ರತಿ ವಸ್ತುಗಳಿಗೆ ಸಹಜ ದರ ನಿಗಧಿಪಡಿಸಬೇಕು ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮಕೈಗೊಳ್ಳಬೇಕೆಂದು ಮನವಿ ನೀಡಲಾಯಿತು ಹಾಗೂ ಶೀಘ್ರ ಶೌಚಾಲಯ ನಿರ್ವಹಣೆ ಸಮರ್ಪಕವಾಗಬೇಕು ಎಂದು ತಿಳಿಸಲಾಯಿತು.




ಈ ಸಂದರ್ಭದಲ್ಲಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಶಿರೂರು ಹಿರಿಯ ನಾಗರೀಕ ವೇದಿಕೆಯ ಚಂದ್ರಶೇಖರ ಶೆಟ್ಟಿ ರಜತಾದ್ರಿ,ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ,ಶ್ರೀಧರ ಕುಮಟಾಕರ್,ವಿಶ್ವ ಮಾನವ ಹಕ್ಕು ತಾಲೂಕು ಅಧ್ಯಕ್ಷ ಮಹೇಂದ್ರ ನಾಯ್ಕ ಕುಮಟಾ,ಬಾಲಕೃಷ್ಣ ನಾಯ್ಕ ಕುಮಟಾಮನೋಹರ ಪೂಜಾರಿ ಶಿರೂರು,ಯೋಗೀಶ್ ಶಿರೂರು,ಈಶ್ವರ ಪೇಟೆ,ಅರುಣ್ ಪೂಜಾರಿ ಜಡಗದ್ದೆ,ವಿನಯ್ ಕುಮಾರ್ ಶಿರೂರು,ಶಿರೂರು ರಿಕ್ಷಾ,ಟೆಂಪೋ,ಚಾಲಕ ಮಾಲಕರ ಸಂಘದ ಸದಸ್ಯರು ಹಾಗೂ ಶಿರೂರಿನ ಸಾರ್ವಜನಿಕರು ಹಾಜರಿದ್ದರು.