ಶಿರೂರು: ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಜೋಗೂರು ಶಿರೂರು ಇದರ ವತಿಯಿಂದ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುತ್ತುಪೌಳಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು. ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗರಾಜ ಭಾಗವತ್ ಇವರ ನೇತ್ರತ್ವದಲ್ಲಿ ಸಾಮೂಹಿಕ ಪ್ರಾರ್ಥನೆ,ಶಿಲಾ ಪಾದುಕಾ ಪೂಜೆ,ನವಶಕ್ತಿ ಆರಾಧನೆ,ಭೂಮಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅಣ್ಣಪ್ಪ ಹಣಬ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ ಕಾರಂತ್,ಯಡ್ತರೆ ಕೋಟಿ ಚೆನ್ನಯ್ಯ ಗರಡಿ ದೇವಸ್ಥಾನದ ಅಧ್ಯಕ್ಷ ಎಸ್.ರಾಜು ಪೂಜಾರಿ,ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ,ಧತ್ತಾತ್ರೇಯ ಭಟ್ ಶಿರೂರು,ನಿವೃತ್ತ ಶಿಕ್ಷಕ ಕೃಷ್ಣಪ್ಪ ಶೆಟ್ಟಿ ಹುಂಚನಿ,ಉದ್ಯಮಿ ಸುರೇಂದ್ರ ಶೆಟ್ಟಿ ಆಲಂದೂರು,ಶಿಲ್ಪಿಗಳಾದ ವಿಶ್ವನಾಥ ಕಾಬೆಟ್ಟು ಕಾರ್ಕಳ,ಉದ್ಯಮಿ ಬಾಬು ದೇವಾಡಿಗ ನಾಯ್ಕನಕಟ್ಟೆ,ಹಿರಿಯ ನಾಗರೀಕ ವೇದಿಕೆಯ ಚಂದ್ರಶೇಖರ ಶೆಟ್ಟಿ ರಜತಾದ್ರಿ,ಆಡಳಿತ ಮಂಡಳಿಯ ಸರ್ವ ಸದಸ್ಯರು,ದಾನಿಗಳು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.






