ಬೈಂದೂರು; ರೈತ ಸಂಘ ಬೈಂದೂರು ಇದರ ವತಿಯಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ 118ನೇ ದಿನಕ್ಕೆ ಕಾಲಿಟ್ಟಿದೆ.ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘಧ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಈಗಾಗಲೇ ಕಳೆದ ನಾಲ್ಕು ತಿಂಗಳಿಂದ ರೈತರು ನ್ಯಾಯಕ್ಕಾಗಿ ಆಗ್ರಹಿಸಿ ಬೈಂದೂರು ತಾಲೂಕು ಆಡಳಿತದ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಸರಕಾರದ ಮಟ್ಟದಲ್ಲಿ ಸಚಿವರು ಅಂಗೀಕರಿಸಿದರು ಸಹ ಅಧಿಕಾರಿಗಳ ವಿಳಂಬದಿಂದಾಗಿ ಇದುವರೆಗೆ ನ್ಯಾಯ ದೊರೆಯಲಿಲ್ಲ.ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರಿಗೆ ಅನ್ಯಾಯವಾದಾಗ ಸರಕಾರ ಮತ್ತು ಇಲಾಖೆ ತಕ್ಷಣ ಸ್ಪಂಧಿಸಬೇಕು.ಆದರೆ ಬೈಂದೂರಿನಲ್ಲಿ ರೈತರಿಗೆ ಅನ್ಯಾಯವಾದರೆ ಅಧಿಕಾರಿಗಳು ಮತ್ತು ಆಡಳಿತ ಸಂಭ್ರಮದಲ್ಲಿದ್ದಾರೆ.ಇದು ರೈತರಿಗೆ ಮಾಡಿದ ಅನ್ಯಾಯ ರೈತರ ನಿರ್ಲಕ್ಷ ಮಾಡಿದ ಯಾವ ಜನಪ್ರತಿನಿಧಿಗಳು ಕೂಡ ಅನ್ನದಾತರು ಕ್ಷಮಿಸಲಾರರು ಎಂದರು ಮತ್ತು ಜನವರಿ 20 ರಂದು ಬ್ರಹತ್ ಜಾಥಾ ನಡೆಸುವ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅರುಣ ಕುಮಾರ್ ಶಿರೂರು,ಸುಬ್ರಹ್ಮಣ್ಯ ಬಿಜೂರು,ಪದ್ಮಾಕ್ಷ ಗೋಳಿಬೇರು,ಕೇಶವ ಪೂಜಾರಿ ಅಂತಾರ್,ಮಧುಕರ ವಸ್ರೆ ಮಂಗೇಶ್ ಶ್ಯಾನುಬಾಗ್ ಮೊದಲಾದವರು ಹಾಜರಿದ್ದರು.

 

Leave a Reply

Your email address will not be published. Required fields are marked *

six − 2 =