ಬೈಂದೂರು; ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ (ರಿ.) ಬೈಂದೂರು ಇದರ ವತಿಯಿಂದ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ,ದೈವಜ್ಞ ಬ್ರಾಹ್ಮಣ ಮಠಾಽಶ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಹಾಗೂ ಪರಮ ಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ದೈವಜ್ಞ ದರ್ಶನ ಕಾರ್ಯಕ್ರಮ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪ ಬೈಂದೂರಿನಲ್ಲಿ ನಡೆಯಿತು.
ಸಂಜೆ ಬೈಂದೂರು ಆಂಜನೇಯ ದೇವಸ್ಥಾನದಿಂದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದವರಗೆ ಚೆಂಡೆ ವಾದನ,ಮಹಿಳಾ ಮಂಡಳಿ ವತಿಯಿಂದ ಭಜನಾ ಕುಣಿತ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿ ಯವರನ್ನು ಬರಮಾಡಿಕೊಳ್ಳಲಾಯಿತು.ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಅಶೀರ್ವಚನ ನೀಡಿದರು.
ಗೌರವಾಧ್ಯಕ್ಷ ಸುಬ್ರಹ್ಮಣ್ಯ ಶೇಟ್,ದೈವಜ್ಞ ಸೊಸೈಟಿ ಅಧ್ಯಕ್ಷ ರವೀಂದ್ರ ಕೆ.ಶೇಟ್,ಉಪಾಧ್ಯಕ್ಷ ಕೃಷ್ಣಮೂರ್ತಿ ಶೇಟ್,ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾ ಶೇಟ್,ನಾವುಂದ- ಬಡಾಕೆರೆ ಮಹಿಳಾ ಸಂಘದ ಅಧ್ಯಕ್ಷೆ ಸುಲೋಚನಾ ಶೇಟ್ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಜರಿದ್ದರು.

ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸತೀಶ ಶೇಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮೋಹನ ರೇವಣ್ಕರ್ ಕಾರ್ಯಕ್ರಮ ನಿರಪಿಸಿದರು.ನರೇಂದ್ರ ಕೆ.ಶೇಟ್ ವಂದಿಸಿದರು.