ಬೈಂದೂರು: ಐತಿಹಾಸಿಕ ಪ್ರಸಿದ್ದ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಕೆಂಡ ಸೇವೆ ಹಾಗೂ ವಾರ್ಷಿಕ ಹಾಲು ಹಬ್ಬ ಜ.14 ಮತ್ತು 15 ರಂದು ನಡೆಯಲಿದೆ.
ಜ.14 ರಂದು ಬೆಳಿಗ್ಗೆ ಶ್ರಿದೇವಿಗೆ ವಿಶೇಷ ಪೂಜೆ,ತುಲಾಭಾರ ಸೇವೆ,ಚಂಡಿಕಾಹೋಮ,ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 9 ರಿಂದ ದೇವಿಯ ಸನ್ನಿಧಿಯಲ್ಲಿ ಗೆಂಡ ಸೇವೆ ನಡೆಯಲಿದೆ.ರಾತ್ರಿ 10ಕ್ಕೆ ಶ್ರೀ ಕ್ಷೇತ್ರ ಗೋಳಿಗರಡಿ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಜ.15 ರಂದು ಬೆಳಿಗ್ಗೆ ಹರಕೆ ಕಾಣಿಕೆ,ಹಣ್ಣುಕಾಯಿ,ತುಲಾಭಾರ ಸೇವೆ,ದರ್ಶನ ನಡೆಯಲಿದೆ.ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.