ಶಿರೂರು:  ಸ್ನೇಹ ಪ್ರೆಂಡ್ಸ್ ಆಲಂದೂರು ಇವರ ಆಶ್ರಯದಲ್ಲಿ ಆಲಂದೂರು ಪ್ರೀಮಿಯರ್ ಲೀಗ್ -2025   30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಆಲಂದೂರಿನಲ್ಲಿ ನಡೆಯಿತು.

ಆಲಂದೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿನಾಯಕ ಗಾಣಿಗ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕ್ರಿಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ.ಇಂದಿನ ಯುವಜನತೆಯು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡರಾಗಬೇಕು ಎಂದರು.

ಗ್ರಾ.ಪಂ ಸದಸ್ಯ ಉದಯ ಮಾಕೋಡಿ,ಅವನಿ ಕ್ಯಾಟರರ್‍ಸ್ ಮಾಲಕ ಅಣ್ಣಪ್ಪ ಗಾಣಿಗ,ಬ್ರಹ್ಮಾವರ ಆರೋಗ್ಯ ಇಲಾಖೆಯ ಮಂಜುನಾಥ ಎಸ್.ಗಾಣಿಗ,ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಸುರೇಶ ಎಸ್.ಪೂಜಾರಿ,ಸತೀಶ ಕೊಠಾರಿ ಆಲಂದೂರು ಉಪಸ್ಥಿತರಿದ್ದರು.

ಸುರೇಶ ಮಾಕೋಡಿ ಸ್ವಾಗತಿಸಿದರು.ಐಶ್ವರ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಕಿಶನ್ ಶೆಟ್ಟಿ ವಂದಿಸಿದರು.

ಚಿತ್ರ:ಸುರೇಶ ಮಾಕೋಡಿ

 

 

Leave a Reply

Your email address will not be published. Required fields are marked *

14 − eleven =