ಶಿರೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬೈಂದೂರು ತಾಲೂಕು ಇದರ ವತಿಯಿಂದ ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ (ರಿ) ಕರಾವಳಿ ಶಿರೂರು ಇದರ ನೂತನ ಅಡುಗೆಕೋಣೆ ಕಟ್ಟಡದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇದರ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾಗಿರುವ ಒಂದು ಲಕ್ಷ ರೂಪಾಯಿ ಮೊತ್ತದ ಮಂಜೂರಾತಿ ಪತ್ರವನ್ನು ಧ.ಗ್ರಾ.ಯೋಜನೆ ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ ಶಿರೂರು ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ.ಪೂಜಾರಿ,ತಾಲೂಕು ಯೋಜನಾಽಕಾರಿ ಸಂಜಯ್ ನಾಯ್ಕ,ಕರಾವಳಿ ಯುವಶಕ್ತಿ ಅಧ್ಯಕ್ಷ ಯಶವಂತ್ ಬಿಲ್ಲವ,ಗೌರವಾಧ್ಯಕ್ಷ ನಾಗಪ್ಪ ಬಿಲ್ಲವ,ವಾಸು ಬಿಲ್ಲವ,ಯೋಗೀಶ್ ಬಿಲ್ಲವ್, ನಾಗಪ್ಪ ಮೊಗೇರ್ ದೊಂಬೆ,ಕಾರ್ಯದರ್ಶಿ ನಾಗರಾಜ ಬಿಲ್ಲವ,ಸುರೇಶ್ ಮೊಗೇರ್,ಭಾಸ್ಕರ ಮೊಗೇರ್,ಸೇವಾಪ್ರತಿನಿಧಿ ಪ್ರತಿಮಾ,ದೇವಕಿ ಬಿಲ್ಲವ,ಸವಿತಾ,ಉಷಾ ಮೊಗೇರ್ ಹಾಗೂ ಯುವಶಕ್ತಿ ಸದಸ್ಯರು ಹಾಜರಿದ್ದರು.


ಯುವಶಕ್ತಿ ಮಾಜಿ ಕಾರ್ಯದರ್ಶಿ ಮಹೇಶ ಮೊಗೇರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಲಯದ ಮೇಲ್ವಿಚಾರಕ ಕೃಷ್ಣ ಎಂ.ಕಾರ್ಯಕ್ರಮ ನಿರೂಪಿಸಿದರು.ಉಪ ಕಾರ್ಯದರ್ಶಿ ಗಿರೀಶ್ ಮೊಗೇರ್ ವಂದಿಸಿದರು.