Month: March 2024

ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಈಶ್ವರಪ್ಪ,ಉಪ್ಪುಂದದಲ್ಲಿ ಬ್ರಹತ್ ಸಂಖ್ಯೆಯಲ್ಲಿ ಕಾರ್ಯಕರ್ತರ ಶಕ್ತಿ ಪ್ರದರ್ಶನ,ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ;ಈಶ್ವರಪ್ಪ

ಬೈಂದೂರು: ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿ ಕಳೆದ ಚುನಾವಣೆಯಲ್ಲಿ ಪಕ್ಷದ ಮುಖಂಡರ ಮಾತಿಗೆ ಚಕಾರವೆತ್ತದೆ ರಾಜಕೀಯ ನಿವೃತ್ತಿ ಘೋಷಿಸಿದೆ. ಈ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ…

ಬಿಜೆಪಿ ಕಾರ್ಯಕರ್ತರ ತಂಟೆಗೆ ಬಂದರೆ ಸಹಿಸಿಕೊಳ್ಳಲಾರೆವು:ಗುರುರಾಜ ಗಂಟಿಹೊಳೆ, ಬಿ.ವೈ ರಾಘವೇಂದ್ರ ಗೆಲುವು ನಿಶ್ಚಿತ

ಬೈಂದೂರು: ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬೆಳೆದು ನಿಂತ ಪಕ್ಷವಾಗಿದೆ.ಪ್ರತಿ ಕಾರ್ಯಕರ್ತನು ಪಕ್ಷದ ಬೆನ್ನಲುಬಾಗಿದ್ದಾರೆ.ಸಂಘರ್ಷದ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಬೈಂದೂರು ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸಣ್ಣ ಮಟ್ಟದ ರಾಜಕೀಯ ಮಾಡುತ್ತಿದ್ದಾರೆ.ಬಿಜೆಪಿ ಕಾರ್ಯಕರ್ತರನ್ನು ಹೆಸದರಿಸುವ ಪ್ರಯತ್ನ ಮತ್ತು ಅಧಿಕಾರದ ಅವಕಾಶ ಉಪಯೋಗಿಸಿಕೊಂಡು…

ಏಪ್ರಿಲ್ 01 ರಿಂದ ಶಿರೂರು ಟೋಲ್ ದರ ಹೆಚ್ಚಳ

ಶಿರೂರು: ರಾಷ್ಟ್ರೀಯ ಹೆದ್ದಾರಿಯ ಟೋಲ್ ದರ ಏಪ್ರಿಲ್ 01 ರಿಂದ ಮತ್ತೆ ಹೆಚ್ಚಳವಾಗಲಿದೆ.ತಲಪಾಡಿಯಿಂದ ಅಂಕೋಲಾ ದವರೆಗೂ ಪ್ರತಿ ಟೋಲ್ ಪ್ಲಾಜಾದಲ್ಲೂ ದರ ಹೆಚ್ಚಳವಾಗಿದ್ದು ಶಿರೂರು ಟೋಲ್ ಪ್ಲಾಜಾದಲ್ಲಿ ನೂತನ ದರ ಈ ರೀತಿ ಇದೆ.

ಅಳ್ವೆಗದ್ದೆ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತದ ಚುನಾವಣಾ ಜಾಗೃತಿಯ ಕಲರವ,ಸಮುದ್ರದ ಮದ್ಯದಲ್ಲಿ ಪ್ರತಿಜ್ಞಾ ವಿಧಿ ಬೋಧನೆ,ರಂಗೋಲಿ ಮೂಲಕ ಮಹಿಳೆಯರ ಸಾಥ್

ಶಿರೂರು: ಅಳ್ವೆಗದ್ದೆ ಕಡಲ ತೀರದಲ್ಲಿ ಶುಕ್ರವಾರ ಮುಂಜಾನೆ ಹೆಚ್ಚುಕಮ್ಮಿ ಪೂರ್ತಿ ಜಿಲ್ಲಾಡಳಿತವೆ ನೆರೆದಿತ್ತು.ಭಾರತ ಚುನಾವಣಾ ಆಯೋಗ,ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಮುಂದಾಳತ್ವದಲ್ಲಿ ಮತದಾನ ಜಾಗೃತಿ ಅಭಿಯಾನದ ಪ್ರಯುಕ್ತ ಚುನಾವಣಾ ಪರ್ವ ದೇಶದ ಗರ್ವ ಎನ್ನುವ ಪರಿಕಲ್ಪನೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ…

ಶಿರೂರಿನಲ್ಲಿ ಚಿತ್ರನಟ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರ,ಜನಸೇವೆ ಮಾಡಲು ಅವಕಾಶ ನೀಡಿ:ಗೀತಾ ಶಿವರಾಜ್ ಕುಮಾರ್

ಶಿರೂರು: ದಿವಂಗತ ಬಂಗಾರಪ್ಪರವರ ಮಗಳಾಗಿ ರಾಜಕೀಯದ ಅನುಭವಗಳನ್ನು ಹತ್ತಿರದಿಂದ ತಿಳಿದಿದ್ದೇನೆ.ಸಾಮಾಜಿಕ ಕ್ಷೇತ್ರದ ಅನುಭವಗಳ ಮೂಲಕ ಜನಸೇವೆ ಮಾಡಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ.ಜನಸಾಮಾನ್ಯರು ಮಹಿಳೆಯರ ಪರ ಸದಾ ಧ್ವನಿಯಾಗಿರುತ್ತೇನೆ.ಜನಸೇವೆ ಮಾಡಲು ಅವಕಾಶ ನೀಡಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ…

ಬಾಂಧವ್ಯ ಫೌಂಡೇಶನ್ ನೆರಳು ಮಾರ್ಚ್ 31 ರಂದು 11ನೇ ಮನೆ ಉದ್ಘಾಟನೆ

ಬೈಂದೂರು: ಬಾಂಧವ್ಯ ಫೌಂಡೇಶನ್(ರಿ.) ನೆರಳು ಇದರ ಯೋಜನೆಯಿಂದ 11ನೇ ಮನೆ ಉದ್ಘಾಟನೆ ಕಾರ್ಯಕ್ರಮ ಮಾ.31 ರಂದು ರವಿವಾರ ಮದ್ಯಾಹ್ನ 3 ಗಂಟೆಗೆ ಮರವಂತೆಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಅರ್ಜುನ ಭಂಡಾರ್ಕರ್,ಉಡುಪಿ ಟೌನ್ ಆರಕ್ಷಕ ಠಾಣೆಯ ಜಯಕರ…

ಶಿವಮೊಗ್ಗ ಲೋಕಸಭಾ ಚುನಾವಣಾ ಕಚೇರಿ ಬೈಂದೂರಿನಲ್ಲಿ ಉದ್ಘಾಟನೆ

ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾರ್ಯಾಲಯವನ್ನು ಸೋಮವಾರ ಬೈಂದೂರಿನ ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ನಲ್ಲಿ ಉದ್ಘಾಟಿಸಲಾಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು…

ಬೈಂದೂರು ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ದಿ ಯೋಜನೆಗಳನ್ನು ಸಾಕಾರಗೊಳಿಸಿದ ಸಂತೃಪ್ತಿಯಿದೆ:ಬಿ.ವೈ ರಾಘವೇಂದ್ರ,ಈ ಚುನಾವಣೆ ರಾಷ್ಟ್ರದ ಪರ ಚಿಂತನೆ ಮಾಡುವ ಪಕ್ಷ ಹಾಗೂ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುವವರ ನಡುವಿನ ಮಹಾಸಮರ

ಬೈಂದೂರು: ಕಳೆದ ವಾರ ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿಗಳು ಆಗಮಿಸಿದಾಗ ಬಹಳಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.ಇಡೀ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ.ಪ್ರಜ್ಞಾವಂತ ಮತದಾರರು ಈ ದೇಶದ ಪ್ರತಿಯೊಂದು ಅಂಶಗಳನ್ನು ಅರ್ಥೈಸಿಕೊಳ್ಳುತ್ತಾರೆ.ಅರಬ್ ರಾಷ್ಟ್ರದಲ್ಲಿ ಕೂಡ ಹಿಂದೂ ದೇವಾಲಯಗಳ ನಿರ್ಮಾಣವಾಗಿದೆ.ಮೋದಿ ನೇತ್ರತ್ವದ ಬಿಜೆಪಿ ಪಕ್ಷ ಅಧಿಕಾರಕ್ಕೆ…

ತ್ರಾಸಿ; ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬ್ಲಾಕ್ ಕಾಂಗ್ರೆಸ್ ಬೈಂದೂರು ಕ್ಷೇತ್ರದ ಕಾರ್ಯಕರ್ತರ ಸಭೆ,ಸುಕುಮಾರ ಶೆಟ್ಟಿ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ಬಂದಂತಾಗಿದೆ:ಗೀತಾ ಶಿವರಾಜ್ ಕುಮಾರ್,ಕೋಟ ವಿರುದ್ದ ಹರಿಹಾಯ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬ್ಲಾಕ್ ಕಾಂಗ್ರೆಸ್ ಬೈಂದೂರು ಕ್ಷೇತ್ರದ ಕಾರ್ಯಕರ್ತರ ಸಭೆ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆಯಿತು. ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾಜಿ…

ಗಡಿ ಭಾಗದಲ್ಲಿ ಆರಂಭಗೊಂಡಿದೆ ಲೋಕಸಭಾ ಚುನಾವಣೆ ಬಿಸಿ,ಶಿರೂರು ಗಡಿಭಾಗದಲ್ಲಿ ಕಟ್ಟುನಿಟ್ಟಿನ ವಾಹನ ತಪಾಸಣೆ

ಶಿರೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದೆ.ಚುನಾವಣೆ ಅಕ್ರಮಗಳ ನಿಗ್ರಹಕ್ಕಾಗಿ ಪೊಲೀಸ್ ಇಲಾಖೆ ಸನ್ನದ್ದವಾಗಿದೆ. ಚುನಾವಣೆ ಇಲಾಖೆ ವಿವಿಧ ತಂಡ ರಚಿಸಿ ಪ್ರತ್ಯೇಖ ಜವಬ್ದಾರಿ ನೀಡಿದೆ.ಮುಖ್ಯವಾಗಿ ಶಿರೂರು ಗಡಿಭಾಗದಲ್ಲಿ ವಾಹನ ತಪಾಸಣೆ ಆರಂಭಗೊಂಡಿದೆ. ವಿವಿಧ ಇಲಾಖೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಜಿಲ್ಲೆಗೆ ಪ್ರವೇಶಿಸುವ…