ಬೈಂದೂರು: ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬೆಳೆದು ನಿಂತ ಪಕ್ಷವಾಗಿದೆ.ಪ್ರತಿ ಕಾರ್ಯಕರ್ತನು ಪಕ್ಷದ ಬೆನ್ನಲುಬಾಗಿದ್ದಾರೆ.ಸಂಘರ್ಷದ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಬೈಂದೂರು ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸಣ್ಣ ಮಟ್ಟದ ರಾಜಕೀಯ ಮಾಡುತ್ತಿದ್ದಾರೆ.ಬಿಜೆಪಿ ಕಾರ್ಯಕರ್ತರನ್ನು ಹೆಸದರಿಸುವ ಪ್ರಯತ್ನ ಮತ್ತು ಅಧಿಕಾರದ ಅವಕಾಶ ಉಪಯೋಗಿಸಿಕೊಂಡು ಒತ್ತಡ ಹೇರುತ್ತಿರುವ ಪ್ರಯತ್ನ ಗಮನಕ್ಕೆ ಬಂದಿದೆ.ಕಾರ್ಯಕರ್ತರಿಗೆ ತೊಂದರೆಯಾದರೆ ನೇರ ನಾಯಕರಿಗೆ ಸವಾಲೆಸೆಯಲು ಸಿದ್ದರಿದ್ದೇವೆ.ತೊಂದರೆಯಾಗುವ ರಾಜಕೀಯ ಬೇಡ ಎನ್ನುವುದು ನನ್ನ ಆಶಯ.ಕಟ್ಟೆ ರಾಜಕೀಯಕ್ಕೆ ಕಿವಿ ಕೊಡಲ್ಲ.ಸಾಧನೆ ಮೂಲಕ ಬಿಜೆಪಿ ಗುರುತಿಸಿಕೊಳ್ಳಲಿದೆ.

ಸಂಸದ ಬಿ.ವೈ ರಾಘವೇಂದ್ರ ಮೂರು ಸಾವಿರ ಕೋಟಿ ಅನುದಾನ ಬೈಂದೂರು ಕ್ಷೇತ್ರಕ್ಕೆ ನೀಡಿದ್ದಾರೆ.ಕೇಂದ್ರ ಸರಕಾರದ ಯೋಜನೆಗಳನ್ನು ತರುವಲ್ಲಿ ದೇಶದಲ್ಲೆ ಮಾದರಿ ಸಂಸದರಾಗಿದ್ದಾರೆ ಮತ್ತು ಬೈಂದೂರಿನ ಬಗ್ಗೆ ವಿಶೇಷ ಪ್ರಾದಾನ್ಯತೆ ಒದಗಿಸಿಕೊಟ್ಟಿದ್ದಾರೆ.ಸಮೃದ್ದ ನಡಿಗೆ ಮೂಲಕ ಹದಿನಾರು ದಿನಗಳ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿದೆ ಚುನಾವಣೆಯ ಸಿದ್ದತೆ ನಡೆಯುತ್ತಿದ್ದು ಸಂಸದ ಬಿ.ವೈ ರಾಘವೇಂದ್ರ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ  ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಭಾರತೀಯ ಜನತಾ ಪಾರ್ಟಿ ಬೈಂದೂರು ಇದರ ವತಿಯಿಂದ ಬೈಂದೂರು ಅಂಬಿಕಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಚುನಾವಣಾ ಉಸ್ತುವಾರಿಗಳಾದ ಬಾನು ಪ್ರಕಾಶ್ ಜೀ,ಬಿಜೆಪಿ ಮುಖಂಡರಾದ ಅಶೋಕ ಮೂರ್ತಿ,ಸದಾನಂದ ಉಪ್ಪಿನಕುದ್ರು,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ,ಬೈಂದೂರು ಬಿಜೆಪಿ ಮಂಡಲದ ಕಾರ್ಯದರ್ಶಿ ಮಹೇಂದ್ರ ಪೂಜಾರಿ,ಉಮೇಶ ಕಲ್ಗದ್ದೆ,ಬೈಂದೂರು ಬಿಜೆಪಿ ಮಂಡಲದ ಕೋಶಾಧಿಕಾರಿ ಗಣೇಶ ಗಾಣಿಗ ಉಪಸ್ಥಿತರಿದ್ದರು.

News/Giri shiruru

 

 

Leave a Reply

Your email address will not be published.

twelve + 6 =