ಬೈಂದೂರು: ಬಾಂಧವ್ಯ ಫೌಂಡೇಶನ್(ರಿ.) ನೆರಳು ಇದರ ಯೋಜನೆಯಿಂದ 11ನೇ ಮನೆ ಉದ್ಘಾಟನೆ ಕಾರ್ಯಕ್ರಮ ಮಾ.31 ರಂದು ರವಿವಾರ ಮದ್ಯಾಹ್ನ 3 ಗಂಟೆಗೆ ಮರವಂತೆಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಅರ್ಜುನ ಭಂಡಾರ್ಕರ್,ಉಡುಪಿ ಟೌನ್ ಆರಕ್ಷಕ ಠಾಣೆಯ ಜಯಕರ ಐರೋಡಿ,ಕಳಿಬಲು ಕೊರಗಜ್ಜ ದೇವಸ್ಥಾನದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಆಗಮಿಸಲಿದ್ದಾರೆ ಎಂದು ಬಾಂಧವ್ಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ದಿನೇಶ ಬಾಂಧವ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.