ಬೈಂದೂರು: ಕಳೆದ ವಾರ ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿಗಳು ಆಗಮಿಸಿದಾಗ ಬಹಳಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.ಇಡೀ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ.ಪ್ರಜ್ಞಾವಂತ ಮತದಾರರು ಈ ದೇಶದ ಪ್ರತಿಯೊಂದು ಅಂಶಗಳನ್ನು ಅರ್ಥೈಸಿಕೊಳ್ಳುತ್ತಾರೆ.ಅರಬ್ ರಾಷ್ಟ್ರದಲ್ಲಿ ಕೂಡ ಹಿಂದೂ ದೇವಾಲಯಗಳ ನಿರ್ಮಾಣವಾಗಿದೆ.ಮೋದಿ ನೇತ್ರತ್ವದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮಹತ್ತರ ಬದಲಾವಣೆಗಳಾಗಿದೆ.ಇಂತಹ ಬದಲಾವಣೆಗಳನ್ನು  ಜಗತ್ತೆ ಒಪ್ಪಿಕೊಂಡಿದೆ.ಈ ಲೋಕಸಭೆ ಚುನಾವಣೆ ರಾಷ್ಟ್ರಪರ ಚಿಂತಿಸುವ ರಾಷ್ಟ್ರ ಭಕ್ತರ ಬಿಜೆಪಿ ಪಕ್ಷ ಹಾಗೂ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುವವರ ಪಕ್ಷದ ನಡುವಿನ ಮಹಾಸಮರ ಎಂದು ಶಿವಮೊಗ್ಗ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು. ಅವರು ಗುರುವಾರ ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ದೇಶದಲ್ಲಿ 112 ಕೋಟಿ ಶೌಚಾಲಯ ನಿರ್ಮಾಣವಾಗಿದೆ.10 ಕೋಟಿ ಮನೆಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ.ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗಿದೆ.ಮನೆ ಮನೆಗೆ ಕುಡಿಯುವ ನೀರು,ಹಸಿದವರಿಗೆ ಅನ್ನ ನೀಡಿದ ಏಕೈಕ ಪಕ್ಷ  ಬಿಜೆಪಿ. ಬೈಂದೂರು ಕ್ಷೇತ್ರದಲ್ಲಿ ಸೌಕೂರು,ವಾರಾಹಿ ಸೇರಿದಂತೆ ಹಲವು ಮಹತ್ತರ ಯೋಜನೆಗಳು ಬಂದಿದೆ.ಶಿವಮೊಗ್ಗ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾಗಿದೆ.ಪಶ್ಚಿಮ ಘಟ್ಟಗಳಿಗೆ ತೊಂದರೆಯಾದಲ್ಲಿ ಸುರಂಗ ರಸ್ತೆ ನಿರ್ಮಾಣದ ಡಿ.ಪಿ.ಆರ್ ಸಿದ್ದಗೊಂಡಿದೆ.ಅಭಿವೃದ್ದಿ ಕಾರ್ಯದ ಮೂಲಕ ಜನರ ವಿಶ್ವಾಸಗಳಿಸಿದೆ ಎಂದರು.

ಮಾಜಿ ಸಚಿವ ಈಶ್ವರಪ್ಪ ಸ್ಪರ್ಧೆ ಕುರಿತು ಪ್ರತಿಕ್ರಯಿಸಿದ ಅವರು ಬಿಜೆಪಿ ಪಕ್ಷ ಪ್ರತಿಯೊಬ್ಬರು ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷವಾಗಿದೆ.ಪಕ್ಷದ ಮುಖಂಡರು ತೀರ್ಮಾನ ಕೈಗೊಳ್ಳುತ್ತಾರೆ.ಹಿರಿಯ ನಾಯಕರಾದ ಈಶ್ವರಪ್ಪ ರವರ ಮೇಲೆ ನನಗೆ ಅಪಾರ ಗೌರವವಿದೆ.ಕೇಂದ್ರದ ನಾಯಕರು ಕೂಡ ಅವರ ಸಂಪರ್ಕದಲ್ಲಿದ್ದಾರೆ.ಇನ್ನು ಸಾಕಷ್ಟು ಸಮಯ ಇರುವ ಕಾರಣ ಉತ್ತಮ ಬೆಳವಣಿಗೆಯ ನಿರೀಕ್ಷೆಯಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಚುನಾವಣಾ ಸಂಚಾಲಕ ಅಶೋಕ ಮೂರ್ತಿ,ಮಂಡಲದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ,ಪ್ರಿಯದರ್ಶಿನಿ ದೇವಾಡಿಗ,ಉಮೇಶ ಕಲ್ಗದ್ದೆ,ರಾಘವೇಂದ್ರ ನೆಂಪು ಹಾಜರಿದ್ದರು.

News/pic: Giri shiruru

 

 

Leave a Reply

Your email address will not be published.

four × one =