Month: October 2023

ಕೋಟೆಮನೆ: ಶ್ರೀ ದುರ್ಗಾಂಬಿಕಾ ದೇವಿಯ ಶರನ್ನವರಾತ್ರಿ,ಪಲ್ಲಕ್ಕಿ ಉತ್ಸವ

ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು,ಕಳಿಹಿತ್ಲು,ಕರಾವಳಿ,ಪಡಿಯಾರಹಿತ್ಲು ,ಅಳ್ವೆಗದ್ದೆ, ಅರಮನೆಹಕ್ಲು, ಮಾರ್ಕೆಟ್ ವಠಾರ,ಬಾಳಿಗದ್ದೆ,ಕೇಸ್ನಿ,ಹಡವಿನಕೋಣೆ,ಕುಂಬ್ರಿಕೊಡ್ಲು ಹಾಗೂ ಶಿರೂರಿನ ವಿವಿಧ ಬಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಕುಂದಗನ್ನಡ ಉತ್ಸವ 2023,ಪ್ರಥಮ ಬಾರಿಗೆ ದುಬೈನಲ್ಲಿ ಮಂದಾರ್ತಿ ಮೇಳದ ಯಕ್ಷಗಾನ

ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಆಶ್ರಯದಲ್ಲಿ ಕುಂದ ಗನ್ನಡ ಉತ್ಸವ 2023 ಕಾರ್ಯಕ್ರಮ ಅಕ್ಟೋಬರ್ 29 ರಂದು ದುಬೈನ ಅಜ್ಮಾನ್ ನಲ್ಲಿ ನಡೆಯಲಿದೆ ಎಂದು ನಮ್ಮ ಕುಂದಾಪ್ರ ಕನ್ನಡ ಬಳಗದ ಉಪಾಧ್ಯಕ್ಷ ಶೀನ ದೇವಾಡಿಗ ಹೇಳಿದರು. ಅವರು…

ಅ.15ರಂದು  ಉಪ್ಪುಂದದಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ

ಬೈಂದೂರು: ಬೈಂದೂರು ರೋಟರಿ ಕ್ಲಬ್ ಆಶ್ರಯದಲ್ಲಿ ಜೆಸಿಐ ಉಪ್ಪುಂದ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಫ್ರೆಂಡ್ಸ್ ಕ್ಲಬ್ ಉಪ್ಪುಂದ, ಜೆಸಿಐ ಬೈಂದೂರು ಸಿಟಿ, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ ಸಂಘ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ಶ್ರೀ…

ಹೆದ್ದಾರಿಯ ಹಸುಗಳಿಗೆ ಆಪತ್ಬಾಂಧವನಾದ ಗ್ಯಾರೇಜ್ ಮಾಲಕ,ಪುಣ್ಯಕೋಟಿ ರಕ್ಷಣೆಗಾಗಿ 18 ವರ್ಷಗಳಿಂದ ಸೇವೆ

ಬೈಂದೂರು: ಹವ್ಯಾಸ ಮತ್ತು ಆಸಕ್ತಿ ಕೆಲವು ವ್ಯಕ್ತಿತ್ವವನ್ನು ರೂಪಿಸುತ್ತದೆ.ಕೆಲವರು ಸೇವೆಯ ಮೂಲಕ ಪ್ರಚಾರದಲ್ಲಿದ್ದರೆ ಇನ್ನೂ ಕೆಲವರು ಸದ್ದಿಲ್ಲದ ಸೇವೆ ಮೂಲಕ ಎಲೆಮರೆಯ ಕಾಯಿಯಂತಿರುತ್ತಾರೆ.ಅಂತಹದ್ದೊಂದು ಸಾಧಕ ಬೈಂದೂರಿನ ಸಂಜೀವ ದೇವಾಡಿಗ. ಅಪಘಾತಗೊಂಡ ಹಸುಗಳ ಆಪತ್ಬಾಂಧವ: ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿದ್ದಾರೆ.ಕಡು ಬಡತನದಿಂದ ಹುಟ್ಟಿ…

ಅ.23 ರಂದು ಮಾನಸ ಮಿತ್ರ ಮಂಡಳಿ ಆಲಂದೂರು 20ನೇ ವರ್ಷದ ಶಾರದೋತ್ಸವ ಬಿಂಬನ -2023 ಕಾರ್ಯಕ್ರಮ

ಶಿರೂರು; ಮಾನಸ ಮಿತ್ರ ಮಂಡಳಿ ಆಲಂದೂರು ಇದರ 20ನೇ ವರ್ಷದ ಶಾರದೋತ್ಸವ ಬಿಂಬನ -2023 ಕಾರ್ಯಕ್ರಮ ಅ.23 ರಂದು ಸ.ಕಿ.ಪ್ರಾ.ಶಾಲೆ ಆಲಂದೂರು ಆವರಣದಲ್ಲಿ ನಡೆಯಲಿದೆ.ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ಭಜನೆ,ಮುದ್ದು ಶಾರದೆ ಸ್ಪರ್ಧೆ,ಧಾರ್ಮಿಕ ಸಭಾ ಕಾರ್ಯಕ್ರಮ,ಸಾಂಸ್ಕ್ರತಿಕ ಸಿಂಚನ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ…

ಕೋಟೆಮನೆ ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ ಅ.15 ರಿಂದ 24 ರ ವರೆಗೆ ನವರಾತ್ರಿ, ವಿಜಯದಶಮಿ ಉತ್ಸವ

ಶಿರೂರು ; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನವರಾತ್ರಿ, ವಿಜಯದಶಮಿ ಉತ್ಸವ ಅ.15 ರಿಂದ 24ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅ.24 ರಂದು ವಿಜಯ…

ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಅ.15ರಿಂದ 24 ರವರೆಗೆ ಶರವನ್ನವರಾತ್ರಿ ಉತ್ಸವ

ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಶರವನ್ನವರಾತ್ರಿ ಮಹೋತ್ಸವ ಅ.15 ರಿಂದ 24ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದುರ್ಗಾಹೊಮ,ದುರ್ಗಾ ಪಾರಾಯಣ,ಚಂಡಿಕಾಹೋಮ,ಮಹಾಮಂಗಳಾರತಿ,ರಂಗಪೂಜೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು…

ಬೈಂದೂರು; ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ

ಬೈಂದೂರು: ದುಶ್ಚಟಗಳು ವಯಕ್ತಿಯ ಅವನತಿಯ ಜೊತೆಗೆ ಸಮಾಜದ ಅವನತಿಗೆ ಕಾರಣವಾಗಿದೆ.ಮಾತ್ರವಲ್ಲದೆ ಒಮ್ಮೆ ದುಶ್ಚಟಗಳಿಗೆ ದಾಸರಾದರೆ ಅದರಿಂದ ಮುಕ್ತನಾಗುವುದು ಸಾಕಷ್ಟು ಕಷ್ಟಕರವಾಗಿರುತ್ತದೆ.ಹೀಗಾಗಿ ಯುವ ಸಮುದಾಯ ಸೇರಿದಂತೆ ಸಮಾಜ ದುಶ್ಚಟಗಳಿಮದ ಮುಕ್ತರಾಗಿರಬೇಕು ಈ ನಿಟ್ಟಿನಲ್ಲಿ ಧ.ಗ್ರಾ.ಯೋಜನೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಗಾಂಧಿ ಸ್ಮರಣಿಯ…

ನಾಡೋಜ ಡಾ.ಜಿ ಶಂಕರ್ ಅವರ 68ನೇ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಬೈಂದೂರು; ನಾಡೋಜ ಡಾ. ಜಿ ಶಂಕರ್ ಅವರ 68ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರಾಜೇಶ್, ಡಾ.ನಂದಿನಿ,ಡಾ.ಜೈಮಿನಿ,ಡಾ.ವತ್ಸಲಾ ರವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಮೊಗವೀರ ಯುವ…

ಜೆಸಿಐ ಶಿರೂರು ಜೇಸಿ  ಹಬ್ಬ -2023 ಸಮಾರೋಪ ಸಮಾರಂಭ

ಶಿರೂರು; ಜೆಸಿಐ ಶಿರೂರು ಇದರ ಜೇಸಿ ಹಬ್ಬ -2023 ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ.ಸಂಘಟನಾತ್ಮಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜೆಸಿಐ ಶಿರೂರು ಜೇಸಿ ವಲಯದಲ್ಲಿ ಪ್ರತಿಷ್ಠಿತ ಘಟಕವಾಗಿ ಗುರುತಿಸಿಕೊಂಡಿದೆ.ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸಮ್ಮಾನ ಹಾಗೂ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಊರಿನ…