ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಆಶ್ರಯದಲ್ಲಿ ಕುಂದ ಗನ್ನಡ ಉತ್ಸವ 2023 ಕಾರ್ಯಕ್ರಮ ಅಕ್ಟೋಬರ್ 29 ರಂದು ದುಬೈನ ಅಜ್ಮಾನ್ ನಲ್ಲಿ ನಡೆಯಲಿದೆ ಎಂದು ನಮ್ಮ ಕುಂದಾಪ್ರ ಕನ್ನಡ ಬಳಗದ ಉಪಾಧ್ಯಕ್ಷ ಶೀನ ದೇವಾಡಿಗ ಹೇಳಿದರು. ಅವರು ತ್ರಾಸಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ದುಬೈನಲ್ಲಿರುವ ಕುಂದಗನ್ನಡಿಗರ ಸಹಾಯ ಹಾಗೂ ತಾಲೂಕಿನ ಶೈಕ್ಷಣಿಕ ಸಾಮಾಜಿಕ ,ಆರೋಗ್ಯ ಸೇರಿದಂತೆ ವಿವಿದ ಕ್ಷೇತ್ರದಲ್ಲಿ ನೆರವಾಗುವ ಉದ್ದೇಶದಿಂದ ಹುಟ್ಟಿಕೊಂಡಿರುವ ಈ ಸಂಸ್ಥೆ ಪ್ರತಿವರ್ಷಶೈಕ್ಷಣಿಕ ಸಹಾಯ,ಗ್ರಾಮೀಣ ಭಾಗದ ಸಂಶಸ್ಥೆಗಳಿಗೆ ಕೊಡುಗೆ,ಕುಂದಾಪ್ರ ದಿನಾಚರಣೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.ಈ ವರ್ಷ ದುಬೈನಲ್ಲಿ ಕುಂದ ಗನ್ನಡ ಉತ್ಸವ ಆಯೋಜಿಸಲಾಗಿದೆ ಎಂದರು..
ಪ್ರಥಮ ಬಾರಿ ದುಬೈನಲ್ಲಿ ಮಂದಾರ್ತಿ ಮೇಳದ ಯಕ್ಷಗಾನ; ರಘುರಾಮ ದೇವಾಡಿಗ ಮಾತನಾಡಿ ಪ್ರಥಮ ಬಾರಿಗೆ ನಮ್ಮ ಕುಂದಾಪ್ರ ಕನ್ನಡ ಬಳಗದ ವತಿಯಿಂದ ದುಬೈನಲ್ಲಿ ಮಂದಾರ್ತಿ ಮೇಳದ ಯಕ್ಷಗಾಗ ಈ ವರ್ಷದ ಕುಂದಗನ್ನಡ ಉತ್ಸವದಲ್ಲಿ ನಡೆಯಲಿದೆ.ಇದರ ಜೊತೆಗೆ ಅಪರೂಪದ ಸಾಧಕರನ್ನು ದುಬೈಗೆ ಕರೆದು ಕುಂದಾಪುರ ರತ್ನ ಪ್ರಶಸ್ತಿ ನೀಡಲಾಗುವುದು.ಹಾಗೂ ದೇಶ ವಿದೇಶದ ಹಲವು ಕುಂದಾಪುರದ ಸಾಧಕರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಪಡುಕೋಣೆಯ ಖ್ಯಾತ ನಾಟಿ ವೈದ್ಯ ಮ್ಯಾಕ್ಸಿಮ್ ಒಲಿವೆರಾ, ಗೋಪ್ರೇಮಿ,ಸಮಾಜ ಸೇವಕ ಸಂಜೀವ ದೇವಾಡಿಗ ಹಾಗೂ ಜೀವರಕ್ಷಕ ಮುಳುಗುತಜ್ಞ ದಿನೇಶ್ ಖಾರ್ವಿ ಅವರನ್ನು ಕುಂದಾಪ್ರ ಕನ್ನಡರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಮಾತನಾಡಿ ನಮ್ಮಕುಂದಾಪ್ರಕನ್ನಡ ಬಳಗ ಆರಂಭವಾದ ದಿನದಿಂದಲೂ ಹತ್ತಾರು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ.ವಿಶೇಷವಾಗಿ ಅರಬ್ ದೇಶಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಕುಂದನಾಡಿಗರಿಗೆ ಸಮಸ್ಯೆಗಳು ಎದುರಾದಾಗ ಮತ್ತು ತುರ್ತು ಸಂದರ್ಭಗಳಲ್ಲಿ ಅನಿವಾಸಿಗಳಿಗೆ ಸ್ಪಂದನೆ ನೀಡಲಾಗುತ್ತಿದೆ.ಕೋವಿಡ್ ಸಂದರ್ಭದಲ್ಲಿ ತುರ್ತಾಗಿ ಊರಿಗೆ ಮರಳುವವರಿಗೆ ವಿಮಾನ ವ್ಯವಸ್ಥೆ, ಉಡುಪಿ ಜಿಲ್ಲೆಯ ಆಸ್ಪತ್ರೆಗಳಿಗೆ ಮಾಸ್ಕ್, ಕಿಟ್ ಮೊದಲಾದವುಗಳನ್ನು ವಿತರಿಸಲಾಗಿದೆ ಎಂದರು.ನಮ್ಮಕುಂದಾಪ್ರಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಆಯೋಜಿಸಲಾಗುತ್ತಿರುವ ಈ ಅದ್ದೂರಿ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಾದನ್‌ದಾಸ್,ಕಾರ್ಯದರ್ಶಿ ಸುಧಾಕರ ಪೂಜಾರಿ, ಪೋಷಕರು, ಗೌರವಾಧ್ಯಕ್ಷರು ಸೇರಿದಂತೆ ವಿವಿಧ ಗಲ್ಪ್ ರಾಷ್ಟ್ರಗಳಲ್ಲಿ ನೆಲೆಸಿರುವ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಸದಸ್ಯರಾದ ಶೀನ ದೇವಾಡಿಗ, ಸುಧಾಕರಆಚಾರ್ಯ, ತಮ್ಮಯ್ಯ ದೇವಾಡಿಗ ಉಪಸ್ಥಿತರಿದ್ದರು.