ಶಿರೂರು; ಜೆಸಿಐ ಶಿರೂರು ಇದರ ಜೇಸಿ ಹಬ್ಬ -2023 ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ.ಸಂಘಟನಾತ್ಮಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜೆಸಿಐ ಶಿರೂರು ಜೇಸಿ ವಲಯದಲ್ಲಿ ಪ್ರತಿಷ್ಠಿತ ಘಟಕವಾಗಿ ಗುರುತಿಸಿಕೊಂಡಿದೆ.ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸಮ್ಮಾನ ಹಾಗೂ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಊರಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ ಎಂದು ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಹೇಳಿದರು ಅವರು ಪೇಟೆ ವೆಂಕಟರಮಣ ಸಭಾ ಭವನದಲ್ಲಿ ನಡೆದ ಜೆಸಿಐ ಶಿರೂರು ಇದರ ಜೇಸಿ ಹಬ್ಬ -2023 ಇದರ ಸಮಾರೋಪ ಕಾರ್ಯಕ್ರಮವನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಶಿರೂರು ಜೆಸಿಐ ಅಧ್ಯಕ್ಷ ನಾಗೇಂದ್ರ ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪ್ಪುಂದ ಜೆಸಿಐ ಅಧ್ಯಕ್ಷ ಪ್ರದೀಪ ಶೆಟ್ಟಿ,ಬಪ್ಪನಬಲು ಜಟ್ಟಿಗೇಶ್ವರ ದೇವಸ್ಥಾನದ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ಶಿರೂರು ಜಿ.ಎಸ್.ಬಿ ಸಮಾಜದ ಅಧ್ಯಕ್ಷ ಗಣೇಶ ಪಿ.ಪ್ರಭು,ನಿಕಟಪೂರ್ವಾಧ್ಯಕ್ಷ ಸುರೇಶ ಮಾಕೋಡಿ,ಜೇಸಿರೇಟ್ ಅಧ್ಯಕ್ಷೆ  ಸ್ಮಿತಾ ಶೇಟ್,ಜ್ಯೂನಿಯರ್ ಜೇಸಿ ಅಧ್ಯಕ್ಷೆ ನಿಶ್ವಿತಾ ರಾಜೇಶ್  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಯವರನ್ನು ಗುರುತಿಸಲಾಯಿತು ಹಾಗೂ ನಿಕಟಪೂರ್ವ ಕಾರ್ಯದರ್ಶಿ ನಾಗರಾಜ ಪ್ರಭು ರವರಿಗೆ  ಯುವ ಜೇಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ 2024ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ ವಿನೋದ ಮೇಸ್ತ ವಂದಿಸಿದರು.

 

Leave a Reply

Your email address will not be published.

four × one =