ಬೈಂದೂರು: ಹವ್ಯಾಸ ಮತ್ತು ಆಸಕ್ತಿ ಕೆಲವು ವ್ಯಕ್ತಿತ್ವವನ್ನು ರೂಪಿಸುತ್ತದೆ.ಕೆಲವರು ಸೇವೆಯ ಮೂಲಕ ಪ್ರಚಾರದಲ್ಲಿದ್ದರೆ ಇನ್ನೂ ಕೆಲವರು ಸದ್ದಿಲ್ಲದ ಸೇವೆ ಮೂಲಕ ಎಲೆಮರೆಯ ಕಾಯಿಯಂತಿರುತ್ತಾರೆ.ಅಂತಹದ್ದೊಂದು ಸಾಧಕ ಬೈಂದೂರಿನ ಸಂಜೀವ ದೇವಾಡಿಗ.
ಅಪಘಾತಗೊಂಡ ಹಸುಗಳ ಆಪತ್ಬಾಂಧವ: ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿದ್ದಾರೆ.ಕಡು ಬಡತನದಿಂದ ಹುಟ್ಟಿ ಬೆಳೆದ ಇವರು ಮದ್ಯಮ ಕುಟುಂಬದವರಾಗಿದ್ದು ನಿತ್ಯ ಕಾಯಕದ ಮೂಲಕ ಬದುಕು ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ.ಕಿರಿಮಂಜೇಶ್ವರದಿಂದ ಶಿರೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಿ ಜಾನುವಾರು ಅಪಘಾತಗೊಂಡು ಅನಾಥವಾಗಿದ್ದರೆ ತಕ್ಷಣ ಸಂಜೀವಣ್ಣ ಆಗಮಿಸಿ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಾರೆ.ಕಳೆದ 18 ವರ್ಷಗಳಿಂದ ನೂರಾರು ಗೋವುಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ .ಇದುವರಗೆ ಸಾವಿರಾರು ಗಾಯಗೊಂಡಿರುವ ದನ ಕರುಗಳನ್ನು ರಕ್ಷಿಸಿದ್ದಾರೆ.ಆದರೆ ಎಲ್ಲಿಯೂ ಕೂಡ ಪ್ರಚಾರ ಪಡೆದಿಲ್ಲ.ಬೈಂದೂರು ವ್ಯಾಪ್ತಿಯಲ್ಲಿ ಪುಣ್ಯಕೋಟಿ ಸಂಜೀವಣ್ಣ ಎಂದೆ ಪ್ರಸಿದ್ದಿಗೊಂಡಿರುವ ಇವರು ಅಪಘಾತಗೊಂಡ ದನಕರುಗಳ ಚಿಕಿತ್ಸೆಗಾಗಿ ಸ್ವಂತಃ ದುಡಿಮೆಯ ಹಣವನ್ನು ವ್ಯಯಿಸುತ್ತಿದ್ದಾರೆ.
ಬೈಂದೂರು ಸಮೀಪದ ಕಳವಾಡಿ ನಿವಾಸಿಯಾಗಿರುವ ಇವರು ಎಳನೆ ತರಗತಿ ವರೆಗೆ ಶಿಕ್ಷಣ ಪಡೆದಿದ್ದು ಬಳಿಕ 12 ವರ್ಷ ಕುಂದಾಪುರ ಗ್ಯಾರೇಜ್‌ನಲ್ಲಿ ಕೆಲಸ ಮಾಡಿದ್ದರು.ಪ್ರಸ್ತುತ ಬೈಂದೂರು ರಾಹುತನಕಟ್ಟೆ ಬಳಿ 12 ವರ್ಷದಿಂದ ಸ್ವಂತಃ ಗ್ಯಾರೇಜ್ ಹೊಂದಿದ್ದಾರೆ.
18 ವರ್ಷಗಳಿಂದ ಮನೆಯ ಕಂಪೌಂಡ್ ಎದುರುಗಡೆ ಪ್ರತಿನಿತ್ಯ ದನ ಕುರುಗಳಿಗೆ ತೊಟ್ಟಿ ಮೂಲಕ ನೀರು ನೀಡುತ್ತಿರುವ ಇವರು ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡುತ್ತಾರೆ. ರಾಷ್ಟ್ರೀಯ ಹೆದ್ದಾರಿ ಅಪಘಾತಗೊಂಡ ಬೀಡಾಡಿ ದನಗರಿಗೆ ಇವರೆ ಆಶ್ರಯದಾತರು.ವಾರೀಸುದಾರದಿಲ್ಲದಿರುವ ದನಕರುಗಳನ್ನು ತಿಂಗಳುಗಟ್ಟಲೆ ಆರೈಕೆ ಮಾಡಿ ಉಪಚರಿಸುತ್ತಾರೆ.ಊರಿನ ಬಸವ ಗಾಯಗೊಂಡಾಗ ಮೂರು ತಿಂಗಳು ಆರೈಕೆ ಮಾಡಿದ್ದರು.ಇವರ ಜೊತೆ ಆರೇಳು ಜನರ ತಂಡ ಕೂಡ ಸಹಕರಿಸುತ್ತಿದೆ.ದನಕರುಗಳಿಗೆ ಗಾಯ ಶುಚಿಗೊಳಿಸಿ ಬ್ಯಾಂಡೆಜ್ ಹಾಕುವುದು, ಗಿಡಮೂಲಿಕೆ ಔಷಧ ನೀಡಿ ಮೂಳೆ ಸರಿಪಡಿಸುವುದು ಸೇರಿದಂತೆ ಪಶು ವೈದ್ಯಾಽಕಾರಿಗಳ ತಂಡಕ್ಕೆ ಇವರು ಅತ್ಯಂತ ಆಪ್ತರು.
ಜಾನುವಾರು ಚಿಕಿತ್ಸೆಗಾಗಿ ಪುಣ್ಯಕೋಟಿ ಆಶ್ರಮ: ಇವರ ಗ್ಯಾರೇಜು ಎದುರುಗಡೆ ಅಪಘಾತಗೊಂಡು ಗಾಯಗೊಂಡಿರುವ ದನಕರುಗಳ ಚಿಕಿತ್ಸೆಗಾಗಿ ಪುಣ್ಯಕೋಟಿ ಎನ್ನುವ ಕುಟೀರ ನಿರ್ಮಿಸಿಕೊಂಡಿದ್ದಾರೆ.ಪ್ರತಿದಿನ ನಾಲ್ಕೈದು ದನಕರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಇವರ ಸೇವೆಯನ್ನು ಗುರುತಿಸಿ ಕುಟೀರ ನಿರ್ಮಾಣಕ್ಕೆ ಕೆಲವು ದಾನಿಗಳು ಸಹಕಾರ ನೀಡಿದ್ದಾರೆ.
ದುಬೈ ಕುಂದಾಪುರ ರತ್ನ ಪ್ರಶಸ್ತಿ: ಇವರ ಸೇವೆಯನ್ನು ಗುರುತಿಸಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಅಕ್ಟೋಬರ್ 29 ರಂದು ನಡೆಯುವ ಕುಂದಗನ್ನಡ ಉತ್ಸವ ಕಾರ್ಯಕ್ರಮದಲ್ಲಿ ಕುಂದಾಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ..
ಹೇಳಿಕೆ.1
ಕಡು ಬಡತನದಲ್ಲಿ ಬೆಳೆದ ನನಗೆ ಗೋವುಗಳ ಸೇವೆ ಮಾಡುವುದು ಮೊದಲಿನಿಂದಲೂ ಆಸಕ್ತಿ.ಮಾತ್ರವಲ್ಲದೆ ಅವುಗಳ ಆರೈಕೆಯಲ್ಲಿ ತೃಪ್ತಿ ಕಂಡಿದ್ದೇನೆ.ಬೈಂದೂರು ವ್ಯಾಪ್ತಿಯಲ್ಲಿ ಎಲ್ಲಿ ದನಕರು ಅಪಘಾತವಾದರೆ ನನಗೆ ಕರೆ ಮಾಡುತ್ತಾರೆ.ದುಡಿಮೆಯ ಒಂದಿಷ್ಟು ಭಾಗದ ಜೊತೆಗೆ ಕೆಲವು ದಾನಿಗಳ ಸಹಕಾರ ನೀಡುತ್ತಾರೆ.ಮುಂದೆ ಜಾನುವಾರು ಚಿಕಿತ್ಸೆಗಾಗಿ ಒಂದು ವಾಹನ ಅವಶ್ಯಕತೆಯಿದೆ.ಪ್ರತಿದಿನ ನಾಲ್ಕೈದು ದನ ಕರುಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ.ಪ್ರಾಣಿ,ಪಕ್ಷಿಗಳಿಗೂ ಕೂಡ ನಮ್ಮಂತೆ ಬದುಕಲು ಹಕ್ಕಿದೆ.ಸೇವೆ ಭಗವಂತನಿಗೆ ತಲುಪಿದರೆ ಸಾಕು..ಈ ಕಾರ್ಯದಲ್ಲಿ ಸಂತ್ರಪ್ತಿ ಇದೆ…………ಸಂಜೀವ ದೇವಾಡಿಗ ಕಳವಾಡಿ
ಹೇಳಿಕೆ.2.
ಇವರು ಯಾವುದೆ ಫಲಾಪೇಕ್ಷೆ ಪಡೆಯದೆ ಗೋ ಸೇವೆ ಮಾಡುತಿದ್ದಾರೆ.ಅತ್ಯಂತ ಶ್ರದ್ದೆಯಿಂದ ಜಾನುವಾರು ಸೇವೆ ಮಾಡುವ ಇವರು ಇಲಾಖೆಯ ಆಪ್ತರು.ನಮ್ಮ ಇಲಾಖೆಯಿಂದ ಇವರಿಗೆ ಅವಶ್ಯ ಇರುವ ಸವಲತ್ತುಗಳನ್ನು ನಿರಂತರವಾಗಿ ನೀಡುತಿದ್ದೆವೆ.ಇವರ ಸೇವೆ ಗುರುತರವಾಗಿದೆ.ಡಾ.ನಾಗರಾಜ್ ಮರವಂತೆ.ಪಶುವೈದ್ಯರು ಬೈಂದೂರು.
News/shiruru.com