ಬೈಂದೂರು: ದುಶ್ಚಟಗಳು ವಯಕ್ತಿಯ ಅವನತಿಯ ಜೊತೆಗೆ ಸಮಾಜದ ಅವನತಿಗೆ ಕಾರಣವಾಗಿದೆ.ಮಾತ್ರವಲ್ಲದೆ ಒಮ್ಮೆ ದುಶ್ಚಟಗಳಿಗೆ ದಾಸರಾದರೆ ಅದರಿಂದ ಮುಕ್ತನಾಗುವುದು ಸಾಕಷ್ಟು ಕಷ್ಟಕರವಾಗಿರುತ್ತದೆ.ಹೀಗಾಗಿ ಯುವ ಸಮುದಾಯ ಸೇರಿದಂತೆ ಸಮಾಜ ದುಶ್ಚಟಗಳಿಮದ ಮುಕ್ತರಾಗಿರಬೇಕು ಈ ನಿಟ್ಟಿನಲ್ಲಿ ಧ.ಗ್ರಾ.ಯೋಜನೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಗಾಂಧಿ ಸ್ಮರಣಿಯ ಜೊತೆಗೆ ದುಶ್ಚಟಗಳ ವಿರುದ್ದ ಜಾಗೃತಿ ಅಭಿಯಾನದ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನ ಮಾಡಲಾಗುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಮಕ್ಕಳಿಗೆ ಮಹಾತ್ಮರ, ಶರಣ ಸಂತರ ಚರಿತ್ರೆಗಳನ್ನು ಬಾಲ್ಯದಿಂದಲೇ ತಿಳಿಸುವ ಮೂಲಕ ಉತ್ತಮ ಸಂಸ್ಕಾರ ನೀಡಬೇಕು ಎಂದು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಬಿ ಅಪ್ಪಣ್ಣ ಹೆಗ್ಡೆ ಹೇಳಿದರು ಅವರು ಬೈಂದೂರಿನ ರಾಜರಾಜೆಶ್ವರಿ ಸಭಾ ಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಬೈಂದೂರು ತಾಲೂಕು,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ,  ತಾಲೂಕು ಜನಜಾಗೃತಿ ವೇದಿಕೆ, ಬೈಂದೂರು. ನವಜೀವನ ಸಮಿತಿಗಳು, ಬೈಂದೂರು. ಶೌರ್ಯಶ್ರೀ ಏಪತ್ತು ನಿರ್ವಹಣಾ ಫಟಕ ಬೈಂದೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬೈಂದೂರು ತಾಲೂಕು ಇವರ ಸಹಯೋಗದಲ್ಲಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಬೈಂದೂರು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಧಾಕರ್ ಆಚಾರ್ಯ ತ್ರಾಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಗಣೇಶ ಆಚಾರ್ಯ,ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ,ಬೈಂದೂರು ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಮ ಎ.ಮೇಸ್ತ,ಕೇಂದ್ರ ಸಮಿತಿ ಒಕ್ಕೂಟದ ನಿಕಟಪೂರ್ವಾಧ್ಯಕ್ಷ ರಘುರಾಮ ಕೆ.ಪೂಜಾರಿ,ಶಿವರಾಜ್ ಪೂಜಾರಿ,ಮಹಾಬಲೆಶ್ವರ ಆಚಾರ್ಯ,ಎಮ್.ಆರ್.ಶೆಟ್ಟಿ,ಸತೀಶ ಎಂ.ನಾಯಕ್,ಭಜನಾ ಪರಿಷತ್ ಉಪಾಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು,ಪ್ರವೀಣ್ ಮೊವಾಡಿ,ಪ್ರಸಾದ ಪ್ರಭು ಉಪಸ್ಥಿತರಿದ್ದರು.

ಯೋಜನಾಧಿಕಾರಿ ಕೆ.ವಿನಾಯಕ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಲಯ ಮೇಲ್ವಿಚಾರಕ ರಾಮ್‌ಗೋಪಾಲ ಸ್ವಾಗತಿಸಿದರು.ದಿನೇಶ್ ಆಚಾರ್ಯ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದರು.ತ್ರಾಸಿ ವಲಯ ಮೇಲ್ವಿಚಾರಕ ಚಂದ್ರು ವಂದಿಸಿದರು.

News/Giri shiruru

Leave a Reply

Your email address will not be published.

two × three =