ಹೇರಂಜಾಲು ಗುಡೇ ದೇವಸ್ಥಾನದ ಏತ ನೀರಾವರಿ ಜಾಕ್ವೆಲ್ ಸ್ಥಳಾಂತರ ಆಗ್ರಹಿಸಿ ಬೈಂದೂರಿನಲ್ಲಿ ಪ್ರತಿಭಟನೆ, ರೈತರಿಗೆ ಅನ್ಯಾಯವಾದರೆ ಅಧಿಕಾರಿಗಳೆ ನೇರ ಹೊಣೆ:ಎಸ್.ಪ್ರಕಾಶ್ಚಂದ್ರ ಶೆಟ್ಟಿ
ಬೈಂದೂರು; ಸಣ್ಣ ನೀರಾವರಿ ಇಲಾಖೆಯ ಯೋಜನೆಗಳು ಅನುಕೂಲವಾಗುವ ಬದಲು ಗುತ್ತಿಗೆದಾರರು ಮತ್ತು ಅಽಕಾರಿಗಳ ಹಿತಾಶಕ್ತಿಗೆ ಮೀಸಲಿರಿಸಿದೆ.ಉಡುಪಿ ಜಿಲ್ಲೆಯ 400 ಕೋಟಿಗೂ ಅಧಿಕ ಅನುದಾನದಲ್ಲಿ ಈ ಇಲಾಖೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ ರೈತರು ಹೊರತುಪಡಿಸಿ ಉಳಿದೆಲ್ಲರು ಫಲಾನುಭವಿಗಳಾಗಿದ್ದಾರೆ.ಯಾವುದೇ ವೆಂಟೆಂಡ್ ಡ್ಯಾಮ್ಗಳು ರೈತರಿಗೆ ಅನುಕೂಲವಾಗಿಲ್ಲ.ಮಾತ್ರವಲ್ಲದೆ…