ಬೈಂದೂರು: ಬೈಂದೂರು ತಾಲೂಕಿನ ಗಂಗನಾಡು ಗ್ರಾಮದ ಕ್ಯಾರ್ತೂರು ತಳಿಮನೆ ಹರೀಶ ಗೊಂಡ ಇವರ ಕೋಳಿ ಫಾರಂ ಶೆಡ್ ಗಾಳಿಗೆ ಕುಸಿದು 20 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.ಬುಧವಾರ ರಾತ್ರಿ ಏಕಾಎಕಿ ಬೀಸಿದ ಗಾಳಿಗೆ ಕೋಳಿ ಫಾರಂ ಶೆಡ್ ಕುಸಿದು ಬಿದ್ದಿದ್ದು ಅಪಾರ ನಷ್ಟ ಉಂಟಾಗಿದೆ.ಸ್ಥಳಕ್ಕೆ ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ, ಪಟ್ಟಣ ಪಂಚಾಯತ್‌ನ ಸಂತೋಷ,ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ದಲಿತ ಮುಖಂಡ ಶಿವರಾಜ್ ಹಾಜರಿದ್ದರು.
