Author: Giri shiruru

ಆಗಸ್ಟ್ 03 ರಂದು ಬೈಂದೂರಿನಲ್ಲಿ ಗಮ್ಮತ್ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ,ಕುಂದಾಪ್ರ ಸೊಗಡುಗಳ ಅನಾವರಣದ ಪ್ರಯತ್ನವೆ ಗಮ್ಮತ್ 2025;ಶರತ್ ಕುಮಾರ್ ಶೆಟ್ಟಿ ಉಪ್ಪುಂದ

ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಹಾಗೂ ಗ್ರಾಮೀಣ ಸಂಸ್ಕೃತಿ ಸೊಗಡನ್ನು ಅನಾವರಣಗೊಳಿಸುವ ಉದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ ಗಮ್ಮತ್ತ್ ಕಾರ್ಯಕ್ರಮವನ್ನು ಅಗಸ್ಟ್ 03ರ ಭಾನುವಾರ ಬೆಳಿಗ್ಗೆ ಗಂಟೆ 09 ರಿಂದ…

ಶಿರೂರು ಟೋಲ್ ವ್ಯವಸ್ಥಾಪಕರಿಗೆ ಬೀಳ್ಕೋಡುಗೆ ಸಮಾರಂಭ,ಸೇವೆಯಿಂದ ನಿವೃತ್ತಿಯಾದರು ಸಹ ಊರಿನ ಬಾಂಧವ್ಯ ಸದಾ ಜಾಗೃತವಾಗಿರುತ್ತದೆ; ರಾಜನ್ ನಾಯರ್

ಶಿರೂರು: ಕಳೆದ 35 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಐ.ಆರ್.ಬಿ) ಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಶಿರೂರು ಟೋಲ್ ಪ್ಲಾಜಾದಲ್ಲಿ ಕಳೆದ ಮೂರು ವರ್ಷಗಳಿಂದ ಟೋಲ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ರಾಜನ್ ನಾಯರ್ ರವರ ಬೀಳ್ಕೋಡುಗೆ ಸಮಾರಂಭ ಶಿರೂರಿನಲ್ಲಿ ನಡೆಯಿತು.ಶಿರೂರು…

ಸೋಮೇಶ್ವರ, ದೊಂಬೆ ಕರಾವಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಶಿರೂರು: ಕಟ್ಟಡ ಕಾರ್ಮಿಕರ ಮಹಿಳಾ ಉಪಸಮಿತಿ ಮತ್ತು ಜನವಾದಿ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೈಂದೂರು, ಸೋಮೇಶ್ವರ,ದೊಂಬೆ, ಕರಾವಳಿ ಮಾರ್ಗವಾಗಿ ಶಿರೂರಿಗೆ ಸರಕಾರಿ ಬಸ್ಸು ವ್ಯವಸ್ಥೆ ಮಾಡಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ಶಿರೂರು ಗ್ರಾಮ…

ಮೂಕಾಂಬಿಕಾ ಎಕ್ಸ್ಪಪ್ರೆಸ್ ರೈಲಿಗಾಗಿ ಸಂಸದ ಬಿ.ವೈ.ರಾಘವೇಂದ್ರ ಮನವಿ

ಬೈಂದೂರು; ಶಿವಮೊಗ್ಗ ಲೋಕಸಭಾ ಸದಸ್ಯರಾದ ಶ್ರೀ ಬಿ.ವೈ.ರಾಘವೇಂದ್ರ ಅವರು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ವಾರಕ್ಕೊಮ್ಮೆ ಇರುವ ರೈಲು ಸಂಖ್ಯೆ 10215/10216 ರೈಲನ್ನು ಮೂಕಾಂಬಿಕಾ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಿ ದಿನಂಪ್ರತಿ ಸೇವೆ…

ಶಿರೂರು,ಬೈಂದೂರು ವಿವಿಧ ಕಡೆಗಳಲ್ಲಿ ನಾಗರಪಂಚಮಿ ಆಚರಣೆ

ಬೈಂದೂರು: ಹಿಂದೂಗಳ ಪವಿತ್ರ ಹಬ್ಬವಾದ ನಾಗರಪಂಚಮಿ ಹಬ್ಬ ಮಂಗಳವಾರ ಬೈಂದೂರು ಹಾಗೂ ಶಿರೂರಿನ ವಿವಿಧ ಕಡೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಶಿರೂರು ಕರಾವಳಿ ನಾಕಟ್ಟೆ ನಾಗಬನ, ಚೆನ್ನಪ್ಪಯ್ಯನತೊಪ್ಪಲು ನಾಗಬನ ಕರಾವಳಿ ಶಿರೂರು, ಶಿರೂರು ಅಳ್ವೆಗದ್ದೆ ನಾಗಬನ, ಉಪ್ಪುಂದ ಸುಮನಾವತಿ ಬಳಿ ನಾಗಮಂದಿರ…

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್, ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಜಾಗತಿಕ ಸಮ್ಮೀಲನ,ಭಾಷೆ ಬದುಕಿನ ಅಭಿವೃದ್ದಿಯ ಸಂಕಲ್ಪ

ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಜಾಗತಿಕ ಕುಂದಗನ್ನಡಿಗರನ್ನು ಒಗ್ಗೂಡಿಸಿ ಅಂರ್ತಜಾಲದ ವರ್ಚುವಲ್ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಲಾಯಿತು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಕಾರ್ಯಕ್ರಮ ಉದ್ಘಾಟಿಸಿದರು.…

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭ ಪುರಸ್ಕಾರ ವಿತರಣೆ, ಪ್ರತಿಭೆ ಮತ್ತು ಪ್ರಯತ್ನ ವಿದ್ಯಾರ್ಥಿಗಳಿಗೆ ಬಹುಮುಖ್ಯ: ನಾಗರಾಜ ಶೆಟ್ಟಿ

ಬೈಂದೂರು; ಸಾಧನೆ ಸುಲಭದ ಮಾತಲ್ಲ.ಕೇವಲ ಪ್ರತಿಭೆಯಿಂದ ಮಾತ್ರ ಯಶಸ್ಸು ಕಾಣಲಾಗದು.ಕಠಿಣ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ.ಜಗತ್ತಿನಲ್ಲಿ ಯಾವುದು ಕೂಡ ಸುಲಭವಾಗಿ ದಕ್ಕುವುದಿಲ್ಲ.ನಾವು ಸ್ವೀಕರಿಸುವ ರೀತಿ ಮತ್ತು ಸಾಧಿಸುವ ಪ್ರಯತ್ನ ಬದುಕಿಗೆ ಸಾರ್ಥಕತೆಯನ್ನು ನೀಡುತ್ತದೆ.ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಪ್ರಯತ್ನದ…

ಬೈಂದೂರು: ಹಿರಿಯ ಭಜನಾ ಹಾಡುಗಾರರಿಗೆ ಗೌರವಾರ್ಪಣೆ ಬೈಂದೂರು ವಲಯ ಭಜನೋತ್ಸವ ಕಾರ್ಯಕ್ರಮ,ಭಗವಂತನನ್ನು ತಲುಪುವ ಸುಲಭ ಮಾರ್ಗ ಅದು ಭಜನೆ;ರಘುರಾಮ ಕೆ.ಪೂಜಾರಿ

ಬೈಂದೂರು: ಮಾನವ ಧರ್ಮದ ನಿರ್ಮಾಣ ಭಜನೆಯಿಂದ ಮಾತ್ರ ಸಾಧ್ಯ.ಒಳ್ಳೆಯ ವ್ಯಕ್ತಿತ್ವ,ಕುಟುಂಬ,ಸಮಾಜ ನಿರ್ಮಾಣದ ಮೂಲಕ ಉತ್ತಮ ದೇಶ ನಿರ್ಮಾಣ ಸಾಧ್ಯ.ಸರಳ ಸಾಹಿತ್ಯದ ಮೂಲಕ ದೇವರನ್ನು ಒಲಿಸಲು ಭಜನೆ ಉಪಯುಕ್ತ.ಭಗವಂತನನ್ನು ತಲುಪುವ ಸುಲಭ ಮಾರ್ಗ ಅದು ಭಜನೆ.ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದೆ.ಭಜನೆ ಇದ್ದಲ್ಲಿ…

ಬೈಂದೂರು:ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆ, 79 ಲಕ್ಷ ಲಾಭ,ಸಂಘದ ಸದಸ್ಯರಿಗೆ ಶೇ.13% ಡಿವಿಡೆಂಟ್ ಘೋಷಣೆ

ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಬೈಂದೂರು ಕಳೆದ ಸಾಲಿನಲ್ಲಿ ಸುಮಾರು 225 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ, 79,17,693.40 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು…

ಬೈಂದೂರು ಸೇನೇಶ್ವರ ದೇವಸ್ಥಾನದ ಅರ್ಚಕ ಕೆರೆಕಟ್ಟೆ ಸೀತಾರಾಮ ಅಡಿಗ ನಿಧನ

ಬೈಂದೂರು: ಐತಿಹಾಸಿಕ ಪ್ರಸಿದ್ದ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ  ಅರ್ಚಕರಾದ ಕೆರೆಕಟ್ಟೆ ಸೀತಾರಾಮ ಅಡಿಗ (72) ಗುರುವಾರ ರಾತ್ರಿ ತಮ್ಮ ಸ್ವ-ಗ್ರಹದಲ್ಲಿ ನಿಧನರಾದರು.ಮೃತರು ಪತ್ನಿ, ಎರಡು ಗಂಡು, ಒಂದು ಹೆಣ್ಣು,ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.