ಬೈಂದೂರು,ಫೆ.20: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ರೈತರ ಅನಿರ್ಧಿಷ್ಟಾವಧಿ ಧರಣಿ 150ನೇ ದಿನಕ್ಕೆ ತಲುಪಿದೆ.150ನೇ ದಿನದ ಪ್ರಯುಕ್ತ ರೈತರು ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಅಹೋರಾತ್ರಿ ಧರಣಿ ನಡೆಸಿದರು.ಧರಣೆಯ ನೇತ್ರತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಕಳೆದ 150 ದಿನಗಳಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ನಡೆಸಿದರು ಕೂಡ ಕಳೆದ 5 ತಿಂಗಳಿಂದ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರು ಕೂಡ ಜಿಲ್ಲಾಡಳಿತ, ಸರಕಾರ ನ್ಯಾಯ ನೀಡಿರಲಿಲ್ಲ.ಬೈಂದೂರು ಭಾಗದ ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದೆ.ರೈತರಿಗಾಗುತ್ತಿರುವ ಅನ್ಯಾಯಕ್ಕೆ ಜನನಾಯಕರೆ ನೇರ ಹೊಣೆ ಎಂದರು.

ಈ ಸಂದರ್ಭದಲ್ಲಿ ಧರ್ಮಗುರು ಸನ್ನಿ ಫಾದರ್,ಆರುಣ್ ಕುಮಾರ್ ಶಿರೂರು,ವೀರಭದ್ರ ಗಾಣಿಗ,ಪದ್ಮಾಕ್ಷ ಗೋಳಿಬೇರು,ನಾಗಪ್ಪ ಮರಾಠಿ ಹೊಸೂರು,ಸುಬ್ರಹ್ಮಣ್ಯ ಬಿಜೂರು,ಹೆರಿಯ ಪೂಜಾರಿ ಗೋಳಿಬೇರು,ಮಹಾದೇವ ಪೂಜಾರಿ ಕಿಸ್ಮತ್ತಿ,ಕೇಶವ ಅಂತಾರ್,ಪ್ರಶಾಂತ ಪಿ.ವಿ,ನಾಗರಾಜ ವಸ್ರೆ ಮೊದಲಾದವರು ಹಾಜರಿದ್ದರು.