ಬೈಂದೂರು: ಹಿರಿಯ ಮೀನುಗಾರ ಮುಖಂಡನಿ,ಸಮಾಜ ಸೇವಕ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಮೀನುಗಾರ ಸಮಾಜದ ಮುಖಂಡ ಕೆ.ಮುತ್ತಯ್ಯ ಖಾರ್ವಿ (67) ಉಪ್ಪುಂದ ಅನಾರೋಗ್ಯದಿಂದ ಬಳಲುತ್ತಿದ್ದು ಸೋಮವಾರ ನಿಧನರಾದರು.ಇವರು ಕರ್ನಾಟಕ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ,ಭಾರತೀಯ ಜನತಾ ಪಾರ್ಟಿ ಮುಖಂಡರಾಗಿ, ಉಪ್ಪುಂದ ಪಂಚಾಯಿತ್ ಉಪಾಧ್ಯಕ್ಷರಾಗಿ, ನಾಡ ದೋಣಿ ಮೀನುಗಾರರ ಸಂಘ ಬೈಂದೂರು ವಲಯದ ಅಧ್ಯಕ್ಷರಾಗಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ,ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಓಲಗ ಮಂಟಪದ ಅಧ್ಯಕ್ಷರಾಗಿ ಊರಿನ ಅದೆಷ್ಟೋ ಸಂಘ ಸಂಸ್ಥೆಯ ಸೇವೆ ಸಲ್ಲಿಸಿದ ಇವರು ಜನರ ಪ್ರೀತಿಯ ನಾಯಕರಾಗಿದ್ದು ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಮೃತರು ಕುಟುಂಬದವರನ್ನು ಹಾಗೂ ಅಪಾರ ಅಭಿಮಾನಿ ಬಂಧುಗಳನ್ನು ಅಗಲಿದ್ದಾರೆ.