ಬೈಂದೂರು:ಬದುಕಿನಲ್ಲಿ ಎರಿಳಿತಗಳು ಸಹಜ.ಸಾಂಸ್ಕ್ರತಿಕ ಕ್ಷೇತ್ರದ ಪಯಣಗಳು ಜೀವನಾನುಭವ ನೀಡುತ್ತದೆ.ಮಾತ್ರವಲ್ಲದೆ ನನ್ನಂಥ ಸಾವಿರಾರು ಜನರಿಗೆ ಬದುಕು ನೀಡಿದೆ.ನೂರಾರು ಶ್ರೇಷ್ಟ  ಪ್ರಶಸ್ತಿಗಳನ್ನು ಪಡೆದಿದ್ದರು ಸಹ ಜನರ ನಡುವೆ ಗುರುತಿಸಿ ದೊರೆಯುವ ಗೌರವ ಅತೀ ಶ್ರೇಷ್ಟವಾಗಿರುತ್ತದೆ. ಬಿಂದುಶ್ರೀ ಪ್ರಶಸ್ತಿ ಸಾರ್ಥಕತೆಯ ಸಂತೃಪ್ತಿಯಾಗಿದೆ.ಜೀವನದ ಕೊನೆ ಉಸಿರಿರುವ ತನಕ ಕಲಾ ಸೇವೆಯ ಮೂಲಕ ಸಮಾಜದ ಋಣ ತೀರಿಸುವ ಜವಬ್ದಾರಿ ಇದೆ ಎಂದು ರಂಗಭೂಮಿ ಕಲಾವಿದೆ ಹಾಗೂ ಹಿರಿಯ ಚಲನಚಿತ್ರ ನಟಿ ಉಮಾಶ್ರೀ ಹೇಳಿದರು ಅವರು ಸುರಭಿ (ರಿ.) ಬೈಂದೂರು  ಸಾಂಸ್ಕ್ರತಿಕ,ಸಾಹಿತ್ಯ,ಸೇವಾ ಪ್ರತಿಷ್ಠಾನ ಇದರ 26ನೇ ವರ್ಷದ ಅಂಗವಾಗಿ ದಿ.ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಿಯ ಸಾಂಸ್ಕ್ರತಿಕೋತ್ಸವದ  ಪ್ರಯುಕ್ತ ಬೈಂದೂರು ಶಾರದಾ ವೇದಿಕೆಯಲ್ಲಿ ಎರಡನೇ ದಿನದ ಸುರಭಿ ಜೈಸಿರಿ 2026ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ಪ್ರಧಾನ ಸ್ವೀಕರಿಸಿ ಈ ಮಾತುಗಳನ್ನಾಡಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ,ನಿವೃತ್ತ ಹಿರಿಯ ಶಾಖಾ ಪ್ರಬಂಧಕ ಹೆಚ್.ವಸಂತ ಹೆಗ್ಡೆ,ಉಡುಪಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ,ಉದ್ಯಮಿ ಪ್ರಸಾದ ಪ್ರಭು,ಉಪ್ಪುಂದ ಅಶೋಕ ಜ್ಯುವೆಲ್ಲರ್‍ಸ್ ಮಾಲಕ ಅನಿಲ್ ಶೇಟ್,ಗಣಪತಿ ಹೋಬಳಿದಾರ್,ಸುರಭಿ ನಿರ್ದೇಶಕ ಸುರಭಿ ನಿರ್ದೇಶಕ ಸುಧಾಕರ ಪಿ.ಬೈಂದೂರು ಉಪಸ್ಥಿತರಿದ್ದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್ ಶುಭಸಂಸನೆಗೈದರು.

ಈ ಸಂದರ್ಭದಲ್ಲಿ  ರಂಗಭೂಮಿ ಕಲಾವಿದೆ ಹಾಗೂ ಹಿರಿಯ ಚಲನಚಿತ್ರ ನಟಿ ಉಮಾಶ್ರೀ ಯವರಿಗೆ 2026ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ರವರಿಗೆ ಗುರುವಂದನೆ ಸಲ್ಲಿಸಲಾಯಿತು ಹಾಗೂ ಮೂಡಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಯವರನ್ನು ಸಮ್ಮಾನಿಸಲಾಯಿತು.

ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪೂರ್ವಾಧ್ಯಕ್ಷ ನಾಗರಾಜ ಪಿ.ಯಡ್ತರೆ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಶ್ರೀನಿವಾಸ ಎಂ.ವಂದಿಸಿದರು.

ವರದಿ/ಗಿರಿ ಶಿರೂರು
ಚಿತ್ರ: ಶಶಾಂಕ್ ಬೈಂದೂರು

Leave a Reply

Your email address will not be published. Required fields are marked *

12 − six =