ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ ಶ್ರೀ ಗುರು ರಾಘವೇಂದ್ರ ಸ್ವಾಮಿ ಜಯಂತಿ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ವಿಶುದ್ದ ಸಾನಿದ್ಯ ಸಮೃದ್ದಿಗೋಸ್ಕರ ಲಕ್ಷ ತುಳಸಿ ಅರ್ಚನೆ ಫೆ.24 ರಂದು ಪೂರ್ವಾಹ್ನ 8:30ಕ್ಕೆ ನಡೆಯಲಿದೆ.ಬೆಳಿಗ್ಗೆ ರಾಯರ ಸನ್ನಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.