ಶಿರೂರು: ದೇವಾಲಯಗಳು ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಯ ಪ್ರತೀಕವಾಗಿದ್ದು, ಸಮಾಜ ಶಕ್ತಿಯುತವಾಗಿ ವಿಸ್ತಾರಗೊಳ್ಳಲು ಸಹಕಾರಿಯಾಗುತ್ತದೆ. ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದ ಮೂಲಕ ಮಾಡುವ ಪುಣ್ಯಕಾರ್ಯವನ್ನು ದೇವರು ಯಾವುದನ್ನೂ ಪರಿಶೀಲಿಸದೇ ಭಕ್ತರಿಗೆ ಅನುಗ್ರಹಿಸುತ್ತಾನೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು ಆವರು ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಮರು ನಿರ್ಮಾಣ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ನಂತರ ಅನುಗ್ರಹ ಆಶೀರ್ವಚನ ನೀಡಿದರು. ಯಾವುದೇ ಸಮಾಜ ಉದ್ದಾರವಾಗಬೇಕಾದರೆ ಅಲ್ಲಿ ಆಚಾರ-ವಿಚಾರ, ದೇವರು, ಧರ್ಮವಿರಬೇಕು. ಅಗ ಮಾತ್ರ ಸಮಾಜದ ಸಮೃದ್ಧಿಯಾಗಿರಲು ಸಾಧ್ಯ ಎನ್ನುವುದು ತತ್ವಸಿದ್ಧಾಂತ. ನಮ್ಮ ಪೂರ್ವಜರು ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಮಠ, ಮಂದಿರಗಳನ್ನು ನಿರ್ಮಾಣ ಮಾಡಿದರು. ಕಾಲ ಬದಲಾದಂತೆ ಹಾಗೂ ದೇಶದ ಅಭಿವೃದ್ಧಿ ದೃಷ್ಠಿದಿಂದ ಪ್ರಸ್ತುತ ಕೆಲವು ಬದಲಾವಣೆಗಾಗಿ ಈ ದೇವಳವನ್ನು ತೆರವುಗೊಳಿಸಬೇಕಾಯಿತು. ಪ್ರಸ್ತುತ ಈ ದೇವಸ್ಥಾನದ ಹಿಂದಿನ ಸ್ಥಳದಲ್ಲಿ ಮೊದಲಿನಂತೆ ನೂತನ ಮಂದಿರ ನಿರ್ಮಾಣವಾಗುತ್ತಿರುವುದು ಖುಷಿಯ ವಿಚಾರ. ಸಮಾಜದ ಸರ್ವರೂ ಏಕತ್ರಯ ಮನಸ್ಸಿನಿಂದ ನೂತನ ದೇವಾಲದ ನಿರ್ಮಾಣದಲ್ಲಿ ಕೈಜೋಡಿಸಬೇಕು. ನಿಮ್ಮೊಂದಿಗೆ ಶ್ರೀಮಠದ ಸಹಕಾರ, ಗುರುಗಳ ಮಾರ್ಗದರ್ಶನವೂ ಇದೆ. ಎಲ್ಲರಿಗೂ ಸ್ವಯಂಸೇವಕರಂತೆ ಶ್ರಮಾದಾನದ ಮೂಲಕವೂ ಸೇವೆ ಸಲ್ಲಿಸುವ ಅವಕಾಶವಿದ್ದು, ಆದಷ್ಟು ಶೀಘ್ರವಾಗಿ ದೇವಸ್ಥಾನ ನಿರ್ಮಾಣ ಪೂರ್ಣಗೊಳಿಸಿ.ಭಕ್ತಿಪೂರ್ವಕ ಸೇವೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು.
ಪೇಟೆ ಹತ್ತು ಸಮಸ್ತರ ಪರವಾಗಿ ಬಾಬುರಾಯ ಕಾಮತ್,ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ವಾಸುದೇವ ಶ್ಯಾನುಭಾಗ್ ಹಾಗೂ ದೇವಳದ ಆಡಳಿತ ಮಂಡಳಿಯ ವತಿಯಿಂದ ಅಧ್ಯಕ್ಷ ಗಣೇಶ ಪ್ರಭು ಗುರುಗಳ ಪಾದಪೂಜೆಗೈದರು. ನೂತನ ದೇವಾಲಯದ ನೀಲನಕ್ಷೆ ಬಗ್ಗೆ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯದರ್ಶಿ ನಾಗರಾಜ ಪ್ರಭು, ಪ್ರಸಾದ ಪ್ರಭು,ಶ್ರೀಕಾಂತ್ ಕಾಮತ್,ಅವಿನಾಶ ಪ್ರಭು ಹಾಗೂ ಸಮಾಜ ಬಾಂಧವರು ಇದ್ದರು.