ಉಪ್ಪುಂದ; ಗಂಗೊಳ್ಳಿಯಲ್ಲಿ ನಡೆಯಲಿರುವ ನಿಜ ಮಹಾತ್ಮ ಡಾ.ಬಿ ಆರ್ ಅಂಬೇಡ್ಕರ್ ಎನ್ನುವ ನಾಟಕ ಪ್ರದರ್ಶನಕ್ಕೆ ಪರ ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದ್ದು ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ 22 ಹೆಚ್ಚು ಪ್ರದರ್ಶನ ಕಂಡು ಎಲ್ಲಿಯೂ ಟೀಕೆಗೆ ಒಳಗಾಗಲಿಲ್ಲ ಪ್ರಶ್ನೆ ಮಾಡುವಂತಹ ಯಾವುದೇ ಪ್ರಸಂಗ ಬರಲಿಲ್ಲ ಅದಾಗಿಯೂ ನಿಮಗೆ ಏನಾದ್ರೂ ಆಕ್ಷೇಪಣೆ ಇದ್ದಲ್ಲಿ ನೀವು ಅದನ್ನು ಕಾನೂನು ರೀತಿಯಲ್ಲಿ ಪ್ರಶ್ನೆ ಮಾಡಲು ಸ್ವತಂತ್ರರಿದ್ದೀರಿ ಆದರೆ ಕಾರ್ಯಕ್ರಮ ನಡೆಯಬಾರದು ಎನ್ನುವುದು ಸರಿಯಲ್ಲ ಈ ನಾಟಕದ ಪರವಾಗಿ ಬೈಂದೂರು ಮಂಡಲದ ಎಸ್.ಸಿ. ಮೋರ್ಚ ಸಂಪೂರ್ಣ ಬೆಂಬಲ ನೀಡಲಿದೆ. ಕಾರ್ಯಕ್ರಮ ಆಯೋಜಕರಿಗೆ ಪ್ರಜಾಸತ್ತಾತ್ಮಕವಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭಾರತೀಯ ಜತನಾ ಪಾರ್ಟಿ ಬೈಂದೂರು ಮಂಡಲ ಎಸ್.ಸಿ ಮೊರ್ಚಾ ಪ್ರದಾನ ಕಾರ್ಯದರ್ಶಿ ಅಕ್ಷಯ್ ಮಂಕಿ ಹೇಳಿದರು.
ಡಿ.21ರಂದು ಉಪ್ಪುಂದ ಶಾಸಕರ ಕಚೇರಿ ಕಾರ್ಯಕರ್ತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾರೆ ಆಗಲಿ ವಿರೋಧ ಮಾಡುವುದಕ್ಕಾಗಿ ವಿರುದ್ಧ ಮಾತನಾಡಬಾರದು, ತಪ್ಪುಗಳು ಕಂಡುಬಂದಲ್ಲಿ ಕಾನೂನಾತ್ಮಕವಾಗಿ ಹೋಗಬೇಕು ಎಂದರು.
ಭಾರತೀಯ ಜತನಾ ಪಾರ್ಟಿ ಬೈಂದೂರು ಮಂಡಲ ಎಸ್.ಸಿ ಮೊರ್ಚಾ ಅಧ್ಯಕ್ಷ ಅಶೋಕ್ ಎನ್. ಡಿ, ಮಾತನಾಡಿ, ಶಾಸಕರಾದವರು ಅಭಿವೃದ್ಧಿಗೆ ಜತೆ ಜತೆಗೆ ಎಲ್ಲಾ ಜನರ ಮಾನಸಿಕತೆ ಸ್ವಭಾವ ವಿಶ್ವಾಸಗಳನ್ನು ಕೊಡುವವರಾಗಬೇಕು ಹಾಗಾಗಿ ನಮ್ಮ ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿಧಾನ ಮಂಡಲ ಅಧಿವೇಶನಕ್ಕೆ ನಮ್ಮ ಕೊರಗ ಸಮುದಾಯದ ಬಂಧುಗಳನ್ನು ಕರೆದುಕೊಂಡು ಹೋಗಿ ಅಲ್ಲಿ ಕಲಾಪ ಪ್ರಕ್ರಿಯೆ ಶಾಸಕರ ಚಟುವಟಿಕೆಗಳು ರಾಜ್ಯದ ಆಡಳಿತ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂಬುದನ್ನು ನೋಡುವ ನೇರ ಅವಕಾಶವನ್ನು ಶಾಸಕರು ಕಲ್ಪಿಸಿ ಕೊಟ್ಟಿರುವುದಕ್ಕೆ ಸಮುದಾಯದ ಪರವಾಗಿ ಅಭಿನಂದಿಸಿದರು.
ಹೆಗ್ಗುಂಜಿ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಎಚ್.ಎಸ್..ಶೆಟ್ಟಿ ಅವರು ಈಗಾಗಲೇ 14 ಮನೆಗಳನ್ನು ನಿರ್ಮಿಸಿ 14 ಕೊರಗ ಕುಟುಂಬದವರಿಗೆ ಹಸ್ತಾಂತರ ಮಾಡಿರುತ್ತಾರೆ. ಡಿ. 25ರಂದು ಈಗಾಗಲೇ ರೆಡಿಯಾಗಿರುವ ಇನ್ನೂ 14 ಮನೆಗಳನ್ನು ಹಸ್ತಾಂತರಿಸಲಿದ್ದಾರೆ ಇಂತಹ ನೂರು ಮನೆಗಳು ನಮ್ಮ ಕ್ಷೇತ್ರದಲ್ಲಿ ಆಗುವಂತಾಗಲಿ ಎಂದು ಬೈಂದೂರು ಎಸ್. ಸಿ. ಮೋರ್ಚಾದ ಪರವಾಗಿ ಎಚ್. ಎಸ್. ಶೆಟ್ಟಿಯವರ ಕಾರ್ಯಾ ವೈಖರಿಯನ್ನು ಶ್ಲಾಘಿಸಿದರು.
ಸಾಮರಸ್ಯ ಆಧಾರಿತ ಕಾರ್ಯಕ್ರಮ; ಶಾಸಕ ಗುರುರಾಜ್ ಗಂಟಿಹೊಳೆ ಅವರ ಚಿಂತನೆ ಮೇರೆಗೆ ಎಸ್.ಸಿ. ಕಾಲೋನಿಗಳಲ್ಲಿ ಸಾಮರಸ್ಯ ಮೂಡಿಸುವುದಕ್ಕಾಗಿ ಶಾಸಕರ ನೇತೃತ್ವದಲ್ಲಿ ಉಪೇಕ್ಷಿತ ಬಂಧುಗಳ ದಂಪತಿ ಪೂಜೆ ಹಾಗೂ ಸಹಭೋಜನವನ್ನು ನಡೆಸಲಾಗುತ್ತಿದೆ ಈ ಕಾರ್ಯಕ್ರಮವು ಈಗಾಗಲೇ ಕೆಲವು ಕಡೆ ನಡೆಸಲಾಗಿದೆ ಇದನ್ನು ಎಸ್ಪಿ ಕಾಲೋನಿಗಳಲ್ಲಿ ಈ ರೀತಿಯ ಕಾರ್ಯಕ್ರಮವನ್ನು ನಡೆಸಲು ಆಲೋಚನೆ ಮಾಡಲಾಗಿದೆ ಎಂದರು. ಏಪ್ರಿಲ್ 14ರಿಂದ ಕ್ಷೇತ್ರದ ಪ್ರತಿ ಬೂತ್ ಗಳಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ ಎಂದರು.
ಭೀಮಸಂಗಮ ಕಾರ್ಯಕ್ರಮ; ಶಾಸಕ ಗುರುರಾಜ್ ಗಂಟಿಹೊಳೆ ಅವರ ಮನೆಯಲ್ಲಿ ಭೀಮಸಂಗಮ ಎನ್ನುವ ಕಾರ್ಯಕ್ರಮವನ್ನು ನಡೆಸಿದ್ದು ಈ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಚಿಂತನೆಗಳು ಹಾಗೂ ಸಂವಿಧಾನದ ಬಗ್ಗೆ ಅತಿಥಿಗಳಿಂದ ಉಪನ್ಯಾಸ. ಹಾಗೂ ಸಹಭೋಜನ ಕಾರ್ಯಕ್ರಮವನ್ನು ನಡೆಸಲಾಗಿದೆ. ಮುಂದೆ ಕೂಡ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೊರಗ ಸಮುದಾಯದ ಹೆಣ್ಣು ಮಗಳೊಬ್ಬಳು ವೈದ್ಯಕೀಯ ಎಂ.ಡಿ. ಪದವಿ ಪಡೆದು ಕೊರಗ ಸಮುದಾಯದ ಪ್ರಥಮ ವೈದ್ಯ ಎಂದು ಸ್ನೇಹ ಕುಂದಾಪುರ ಅವರು ಸಾಧನೆ ಮಾಡಿದ್ದಾರೆ ಇದು ಮುಂದಿನ ಪೀಳಿಗೆಗೆ ಮಾದರಿ ಎಂದು ವಿದ್ಯಾರ್ಥಿನಿಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂತೋಷ್ ಮೂಡಬಗೆ, ಎಸ್. ಸಿ ಮೋರ್ಚಾ ಪ್ರಭಾರಿ ನಾಗರತ್ನ, ಉಡುಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾಯ೯ದಶಿ೯ ಪುಷ್ಪರಾಜ್ ಶೆಟ್ಟಿ ಶಿರೂರು, ಭಾರತೀಯ ಜತನಾ ಪಾರ್ಟಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.