ಬೈಂದೂರು; ನಾಟಕ ಕೇವಲ ನಟನೆ ಮಾತ್ರ ಆಗಿ ಉಳಿಯದೆ ನಟನೊಬ್ಬ ತನ್ನನ್ನು ತಾನು ಹಾಗೂ ಸಮಾಜದ ಸುತ್ತಲಿನ ಭೌದ್ದಿಕ ಸ್ಥಿತಿಯನ್ನು ಅರಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಕೊಡುಗೆ ನೀಡಿದಂತಾಗುತ್ತದೆ.ಧಾವಂತದ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಹಿಂದಿಕ್ಕಿ ಹೋಗುತ್ತಿದ್ದೇವೆ.ಆಧುನಿಕ ಬದುಕಿನ ಅಗತ್ಯತೆಗಳ ನಡುವೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕು ಸುಂದರವಾಗುತ್ತದೆ ಸುರಭಿ ಸಂಸ್ಥೆ ಕಳೆದ 25 ವರ್ಷಗಳನ್ನು ಪೂರೈಸುವುದರ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡ ಸುರಭಿ ಸಂಸ್ಥೆಯ ತನ್ನ ಕಾರ್ಯಗಳ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು ಅವರು ಸುರಭಿ (ರಿ.)ಬೈಂದೂರು ಇದರ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ಬೈಂದೂರು ಯಡ್ತರೆ ಜೆ.ಎನ್.ಆರ್ ಕಲಾಮಂದಿರದ ಹೊರಾಂಗಣ ಸಭಾ ವೇದಿಕೆಯಲ್ಲಿ ನಡೆದ 8 ದಿನಗಳ ಕಾಲ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು.
ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಶ್ರೀ ರಾಮ ವಿವಿದೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟಿ ರಾಮಕೃಷ್ಣ ಕೃಷ್ಣ ಶೇರುಗಾರ್,ಉದ್ಯಮಿ ವೆಂಕಟರಮಣ ಶೇರುಗಾರ್ ಬಿಜೂರು, ಮಾರಿಕಾಂಬಾ ಹಾಲಿಡೇಸ್‌ನ ರಾಜು ಪೂಜಾರಿ ಗಜಿ೯ನಹಿತ್ಲು ,ಕರ್ಣಾಟಕ ಬ್ಯಾಂಕ್ ನಾಗೂರು ಶಾಖಾ ವ್ಯವಸ್ಥಾಪಕ ಪರಮೇಶ್ವರ ಪೂಜಾರಿ,ಉದ್ಯಮಿ ರಾಮು ಮೇಸ್ತ. ನಿತೀನ ಶೆಟ್ಟಿ ಬೈಂದೂರು,ವಿಲ್ಸನ್ ಡಯಾಸ್ ಶಿರೂರು,ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾಟಕದ ತೀರ್ಪುಗಾರರನ್ನು ಹಾಗೂ ರಂಗ ಕಲಾವಿದ ಸತ್ಯನಾ ಕೊಡೇರಿ ಯವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಸುಧಾಕರ ಪಿ.ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶ್ರೀನಿವಾಸ ನಾವುಂದ ಸ್ವಾಗತಿಸಿದರು.ಶಿಕ್ಷಕ ಅಬ್ದುಲ್ ರವೂಪ್ ಕಾರ್ಯಕ್ರಮ ನಿರೂಪಿಸಿದರು.ಕಾವೇರಿ ಗಾಣಿಗ ವಂದಿಸಿದರು.
ವರದಿ/ಗಿರಿ ಶಿರೂರು