ಬೈಂದೂರು: ಕಳೆದ 78 ದಿನಗಳಿಂದ ನ್ಯಾಯಕ್ಕಾಗಿ ನೂರಾರು ರೈತರು ತಾಲೂಕು ಆಡಳಿತ ಸೌಧದ ಎದುರು ಅನಿಧಿಷ್ಟಾವಧಿ ದರಣಿ ನಡೆಸುತ್ತಿದ್ದಾರೆ ಸಾವಿರಾರು ರೈತರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಹತ್ತಾರು ಬಾರಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದರು ಕೂಡ ಕನಿಷ್ಟ ಪಕ್ಷ ಕುಳಿತುಕೊಂಡು ಮಾತನಾಡಿಸಿದ ಜಿಲ್ಲಾಧಿಕಾರಿಗಳು ಬೈಂದೂರಿಗೆ ಬಂದರು ರೈತರ ಬಳಿ ಬಂದಿಲ್ಲ ಕನಿಷ್ಟ ಒಂದು ಅಧಿಕಾರಿಗಳ ನಿಯೋಗ ರಚಿಸಿ ರೈತರ ಸಮಸ್ಯೆ ಆಲಿಸದ ಇವರು ಬೈಂದೂರು ಉತ್ಸವದ ಬಗ್ಗೆ ಮುತುವರ್ಜಿ ವಹಿಸಿ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ರೈತರನ್ನು ನಿರ್ಲಕ್ಷಿಸಿದ ಜಿಲ್ಲಾಧಿಕಾರಿಗಳ ನಡೆಯ ಬಗ್ಗೆ ಬೈಂದೂರು ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರದ ಬಳಿಕ ಗಣಿ ಇಲಾಖೆಗೆ ಮುತ್ತಿಗೆ ;ಬೈಂದೂರು ರೈತ ಸಂಘದ ಅಧ್ಯಕ್ಚ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ  ರೈತರ ಬೇಡಿಕೆ ಶೀಘ್ರ ಈಡೇರಿಸಿ ಸಂಪುಟ ಸಭೆಯಲ್ಲಿಡಲು ಸ್ವತಃ ಸಚಿವರೆ ಸೂಚಿಸಿದ್ದಾರೆ.ಅದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ದಿನಕ್ಕೊಂದು ಸಬೂಬು ನೀಡಿ ಸಮಯ ಕಳೆಯುತ್ತಿದ್ದಾರೆ.ಹಾಲಿ ಶಾಸಕರು ಮಾಜಿ ಶಾಸಕರು ಸಂಸದರು ಮಂತ್ರಿಗಳು ಎಲ್ಲರೂ ಕೂಡ ಪಕ್ಷಾತೀತವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಹಾಗಿದ್ದರೆ ಯಾವ ಅಡ್ಡಿಯಿಂದ ವಿಳಂಬವಾಗುತ್ತದೆ ಎಂದಾದರು ತಿಳಿಸಿ ಉಡುಪಿ ಜಿಲ್ಲೆಯಲ್ಲಿ ಅದರಲ್ಲೂ ಬೈಂದೂರು ಕುಂದಾಪುರ ತಾಲೂಕಿನಲ್ಲಿ ಯಾವ ಇಲಾಖೆಯ ಕೆಲಸ ನಡೆದಿಲ್ಲ ಹಾಗಿದ್ದರೆ ಇಲಾಖೆ ಹೆಸರಲ್ಲಿ ಮಂಜೂರಾದ ಸಾವಿರಾರು ಲೋಡ್ ಮರಳು ಎಲ್ಲಿಗೆ ಹೋಗಿದೆ.ಮರಳು ದಂದೆ ಯಾವ ಕಾನೂನು ನಿಯಮ ಪಾಲನೆ ಇಲ್ಲ . ನಮ್ಮ ರೈತರ ಬೇಡಿಕೆಗೆ ನಿಯಮ ಬೋಧನೆ ಮಾಡುತ್ತಾರೆ ಮರಳು ದಂಧಗೆ ಹೊಂದಾಣಿಕೆ ನಡೆಯುತ್ತದೆ.ಅಲ್ಲಿ ಯಾವ ಕಾನೂನು ತೊಡಕುಗಳಿಲ್ಲ ನಿಯಮ ಬಾಹಿರವಾಗಿ ಕೋಟ್ಯಾಂತರ ರೂಪಾಯಿ ಭ್ರಷ್ಟಚಾರ ನಡೆಯುತ್ತಿದೆ ರೈತರಿಗೆ ಮಾತ್ರ ಅನಗತ್ಯ ಅಡ್ಡಿ ಇದು ಜಿಲ್ಲಾಡಳಿತದ ರೈತ ವಿರೋದಿ ನಡೆಯಾಗಿದೆ.ಹೀಗಾಗಿ ರೈತ ಸಂಘ ಸೋಮವಾರದಿಂದ ಗಣಿ ಇಲಾಖೆಗೆ ಮುತ್ತಿಗೆ ಹಾಕುದ ಸಿದ್ದತೆ ನಡೆಸಿದ್ದೇವೆ.ನಮಗೊಂದು ನ್ಯಾಯ ಅವರಿಗೊಂದು ನ್ಯಾಯ ಬೇಡ ಎಲ್ಲವು ಕಾನೂನು ರೀತಿಯಲ್ಲಿ ಜಿಲ್ಲಾಡಳಿತ ನಡೆಸಲಿ ಈಗಾಗಲೆ ಜಿಲ್ಲಾಡಳಿತದ ಕಾನೂನು ಪಾಲನೆಯಾಗದ ಎಲ್ಲಾ ವಿವರಗಳನ್ನು ಜನರ ಮುಂದಿಡುತ್ತೆವೆ ಹೊಂದಾಣಿಕೆಯ ರಾಜಕೀಯ ರೈತರ ಮುಂದೆ ನಡೆಯದು ಎಂದರು.

 

Leave a Reply

Your email address will not be published. Required fields are marked *

twenty − 17 =