ಶಿರೂರು : ಸ್ಟ್ರೇಂಜರ್‍ಸ್ ಪುಟ್‌ಬಾಲ್ ಕ್ಲಬ್ ಹಾಗೂ ಯಂಗ್ ಮೆನ್ಸ್ ಕ್ಲಬ್ ಶಿರೂರು ಇವರ ಆಶ್ರಯದಲ್ಲಿ ಹೊನಲು ಬೆಳಕಿನ ವಿಂಟರ್ 5.0 ಪುಟ್‌ಬಾಲ್ ಪಂದ್ಯಾಟ ಹಡವಿನಕೋಣೆ ಶಿರೂರಿನಲ್ಲಿ ನಡೆಯಿತು.
ಕರಾವಳಿ ಅಭಿವೃದ್ದಿ ಪ್ರಾಧಿಕಾರ ನಿಗಮ ಮಂಗಳೂರು ಅಧ್ಯಕ್ಷ ಜನಾಬ್ ಎಂ.ಎ ಗಫೂರ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆ ದೈಹಿಕ ಚೈತನ್ಯದ ಜೊತೆಗೆ ಮಾನಸಿಕ ಸಂತೃಪ್ತಿ ನೀಡುತ್ತದೆ.ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವ ಮೂಲಕ ಪರಸ್ಪರ ಸ್ನೇಹ ಸಾಮರಸ್ಯ ವೃದ್ದಿಯಾಗುತ್ತದೆ.ಶಿರೂರಿನಲ್ಲಿ ಹಲವು ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆ ಆಯೋಜಿಸಿದ ಹೆಗ್ಗಳಿಕೆಯಿದೆ.ಹೀಗಾಗಿ ಹಡವಿನಕೋಣೆಯಲ್ಲಿ ಸಂಘಟಿಸಿದ ಪುಟ್‌ಬಾಲ್ ಪಂದ್ಯಾಟಕ್ಕೆ ಉತ್ತಮ ಸ್ಪಂಧನೆ ದೊರೆತಿದೆ ಎಂದರು.
ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೂರಜ್ ಪೂಜಾರಿ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ,ಪ್ರಸನ್ನ ಕುಮಾರ್ ಶೆಟ್ಟಿ,ತಾರಿಸುಲ್ಲಾ ಮಹಮ್ಮದ್ ಗೌಸ್,ಮುಕ್ರಿ ಅಲ್ತಾಫ್,ಮಹ್ಮದ್ ಫಾರೂಕ್,ರವೀಂದ್ರ ಶೆಟ್ಟಿ ಪಟೇಲ್,ವೀರಭದ್ರ ಗಾಣಿಗ,ಶಬ್ಬಿರ್ ಬೈಂದೂರು,ಎಚ್.ಎಸ್ ಸಿದ್ದಿಕ್,ಶೇಖರ ಪೂಜಾರಿ ಉಪ್ಪುಂದ,ಮೊಮಿನ್ ಮುಕ್ತಿಯಾರ್,ಬುವಾಜಿ ಮುಶೀನ್,ಮಹ್ಮದ್ ಇಬ್ರಾಹಿಂ,ಕೆ.ಮುಸ್ತಾಕ್,ಮಣೆಗಾರ್ ಮನ್ಸೂರ್,ಹಬಿಬುಲ್ಲಾ,ರೆಹಮಾನ್ ಹಬಿಬುಲ್ಲಾ ಮೊದಲಾದವರು ಉಪಸ್ಥಿತರಿದ್ದರು.