ಶಿರೂರು: ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ,ಕೋಟತಟ್ಟು ಗ್ರಾಮ ಪಂಚಾಯತ್, ಶ್ರೀ ವೇಣುಗೋಪಾಲಕೃಷ್ಣ ಎಜ್ಯುಕೇಶನ್ ಸೊಸೈಟಿ ಮೂಡುಕೇರಿ,ಬಾರ್ಕೂರು ಕೈಂಡ್ ಹಾರ್ಟ್ ಬಾಳ್ಕುದ್ರು,ಗೀತಾನಂದ ಫೌಂಡೇಶನ್ ಮಣೂರು -ಪಡುಕೆರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೈಂದೂರು ಸೈಂಟ್ ಥೋಮಸ್ ಶಾಲೆಯ ಶ್ರವಣ್ ರಾವ್ ಶಿರೂರು ಇವರಿಗೆ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್,ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ ಕುಂದರ್,ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮೊದಲಾದವರು ಹಾಜರಿದ್ದರು.
