ಬೈಂದೂರು: ರಾಹುತೇಶ್ವರ ಪ್ರೆಂಡ್ಸ್ ರಾಹುತನಕಟ್ಟೆ ಯಡ್ತರೆ ಬೈಂದೂರು ಇದರ ದಿ.ವೆಂಕಟ ಪೂಜಾರಿ ಇವರ ಸವಿನೆನಪಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ಗರ್ಜಿನಹಿತ್ಲು ಮೈದಾನ ರಾಹುತನಕಟ್ಟೆಯಡ್ತರೆಯಲ್ಲಿ ನಡೆಯಿತು.

ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂದ್ಯಾಟ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವೆಂಕಟ ಪೂಜಾರಿಯವರು ಜಿಲ್ಲೆಯ ಬಹುದೊಡ್ಡ ಸಾಮಾಜಿಕ ಮುಂದಾಳು ಅಗಿದ್ದು ಸಾಂಪ್ರದಾಯಿಕ ಬದುಕನ್ನು ಮುನ್ನೆಡಿಸಿದ ಹೆಗ್ಗಳಿಕೆ ಹೊಂದಿದವರಾಗಿದ್ದರು.ಬದುಕಿನ ರೀತಿ ಯುವಕರಿಗೆ ಮಾರ್ಗದರ್ಶನೀಯ,ಯುವ ಸಂಘಟನೆ ಮೂಲಕ ಊರಿನ ಅಭಿವ್ರದ್ದಿಗೆ ಮುಂದಾದ ಯುವಕರ ಪ್ರಯತ್ನ ಮಾದರಿಯಾಗಿದೆ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ವೆಂಕಟ ಪೂಜಾರಿಯವರ ಬದುಕಿನ ಆದರ್ಶ ನಮಗೆಲ್ಲ ಮಾರ್ಗದರ್ಶನವಾಗಿದೆ.ಕಂಬಳ ಕ್ಷೇತ್ರದಲ್ಲಿ ಬೈಂದೂರಿನ ಹೆಸರನ್ನು ಬೆಳಗಿದ ಸಾಧನೆ.ಕ್ರೀಡಾ ಸ್ಪರ್ಧೆ ಆಯೋಜನೆ ಮೂಲಕ ಯುವ ಸಮ್ಮಿಲನ ಆಯೋಜಿಸಿದ ಸಂಸ್ಥೆಯ ಕಾರ್ಯ ಉತ್ತಮವಾಗಿದೆ ಎಂದರು.

ಶ್ರೀ ರಾಹುತೇಶ್ವರ ಫ್ರೆಂಡ್ಸ್ ಅಧ್ಯಕ್ಷ ವೀರೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಶ್ರೀ ವರಲಕ್ಷ್ಮಿ   ಚಾರಿಟೇಬಲ್‌ ಟ್ರಸ್ಟ್‌ ಮ್ಯಾನೇಜಿಂಗ್‌ ಟ್ರಸ್ಟಿಡಾ.ಗೋವಿಂದ ಬಾಬು ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ್‌ ಬಟವಾಡಿ, ಸದಾಶಿವ ಡಿ.ಪಡುವರಿ,ತಾ.ಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಪತ್ರಕರ್ತ ಕೆ.ಸಿ ರಾಜೇಶ್, ಶಿವರಾಮ  ಪೂಜಾರಿ,ರಾಜು ಮೊಗವೀರ,ಉದ್ಯಮಿ ಸುರೇಶ್‌ ಶೆಟ್ಟಿ, ಮಂಜುನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿ ಜನಮಾನಸ ಸೇರಿದ ದಿ ವೆಂಕಟ ಪೂಜಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ವಿವಿಧ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ರಾಮ ಮೊಗವೀರ ಸ್ವಾಗತಿಸಿದರು.ಕಿರಣ್‌ ಬಿಜೂರು ಕಾರ್ಯಕ್ರಮ ನಿರೂಪಿಸಿದರು.ಪ್ರಸನ್ನ ವಂದಿಸಿದರು.

ಹಗ್ಗ ಜಗ್ಗಾಟ ಫಲಿತಾಂಶ

 

ಮಹಿಳಾ ವಿಭಾಗ

ಪ್ರಥಮ: ಪರಶುರಾಮ ಫ್ರೆಂಡ್‌್ಸ ಉದ್ದನೆ

ದ್ವಿತೀಯ: ಉಡುಪಿ ಪ್ರೆಂಡ್ಸ್

ಪುರುಷರ ವಿಭಾಗ

ಪ್ರಥಮ: ಸೌಮ್ಯಾ ಟ್ರಾವೆಲ್ಸ್‌ ಶಿರೂರು

ದ್ವಿತೀಯ: ಆಪತ್ಭಾಂದವ ಗೆಳೆಯರ ಬಳಗ

ವರದಿ/ ಗಿರಿ ಶಿರೂರು

Leave a Reply

Your email address will not be published. Required fields are marked *

1 × five =