ಬೈಂದೂರು : ಶ್ರೀ ಕ್ಷೇತ್ರ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಳವಾಡಿ ಇದರ ಪ್ರಥಮ ದೇವರ ಸೇವೆ ಆಟ ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಬೈಂದೂರು ಬಂಟರ ಯಾನೆ ನಾಡವರ ಸಂಘ ಬೈಂದೂರು ಅಧ್ಯಕ್ಷ ಜಿ.ಗೋಕುಲ್ ಶೆಟ್ಟಿ ಪ್ರಥಮ ದೇವರ ಸೇವೆಯಾಟಕ್ಕೆ ಚಾಲನೆ ನೀಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಕಳವಾಡಿ ಮಾರಿಕಾಂಬಾ ದೇವಸ್ಥಾನ ಪೌರಾಣಿಕ ಹಿನ್ನೆಲೆ ಹೊಂದಿದ ಧಾರ್ಮಿಕ ಕ್ಷೇತ್ರವಾಗಿದೆ.ಬಹಳ ವರ್ಷಗಳ ಹಿಂದೆ ಪ್ರಸಿದ್ದಿ ಹೊಂದಿದ ಕಳವಾಡಿ ಯಕ್ಷಗಾನ ಮೇಳ ಕಳೆದ ವರ್ಷದಿಂದ ಪುನರಾರಂಭಗೊಂಡಿರುವುದು ಕ್ಷೇತ್ರದ ಪ್ರಸಿದ್ದಿಯನ್ನು ಇನ್ನಷ್ಟು ಹೆಚ್ಚಿಸಿದೆ.ಕಲಾ ಸೇವೆ ಮೂಲಕ ಕ್ಷೇತ್ರದ ವರ್ಚಸ್ಸು ಜನಮನ ತಲುಪುವಂತಾಗಲಿ ಎಂದರು.
ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಅಭಿಜಿತ್ ಹೆಗ್ಡೆ ಕಳವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳವಾಡಿ ಮಾರಿಕಾಂಬಾ ದೇವಸ್ಥಾನ ಬೈಂದೂರು ಕ್ಷೇತ್ರದ ಪೌರಾಣಿಕ ಹಿನ್ನೆಲೆ ಹೊಂದಿರುವ ಕ್ಷೇತ್ರವಾಗಿದೆ.ಕ್ಷೇತ್ರದ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಹೊಸತನಗಳನ್ನು ಅಳವಡಿಸಿ ಭಕ್ತಾಧಿಗಳಿಗೆ ಪೂರಕವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.ಕಳೆದ ವರ್ಷ ಕಳವಾಡಿ ಮೇಳ ಅದ್ದೂರಿ ಯಶಸ್ಸು ಕಂಡಿದ್ದು ಹೊಸ ಆಡಳಿತ ಮಂಡಳಿಯೊಂದಿಗೆ ಈ ವರ್ಷ ತಿರುಗಾಟ ಆರಂಭಿಸಿದೆ ಎಂದರು.
ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಮುಂಬೈ ಹೊಟೇಲ್ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಹೊಸೂರು, ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಹಕ್ಲಾಡಿ, ಸುರೇಶ್ ಶೆಟ್ಟಿ ಹಿಂಬಾಳೆಮನೆ ಸಿದ್ದಾಪುರ, ಮಂಗಳೂರು ಫಾದರ್ ಮಲ್ಲರ್ ಆಸ್ಪತ್ರೆಯ ವೈದ್ಯ ಪ್ರಭಾಕರ್ ಡಿ.ಎಂ.ಓ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಮಾಜಿ ನಿರ್ದೇಶಕ ಬಿ. ರಘುರಾಮ್ ಶೆಟ್ಟಿ, ಮೇಳದ ಸಂಚಾಲಕ ಉದಯಕುಮಾರ್ ಸಂತೆಕಟ್ಟೆ, ಮೇಳದ ವ್ಯವಸ್ಥಾಪಕಾ ಕಿರಣ್ ಆಚಾರ್ಯ ಕೊಟೇಶ್ವರ, ದೇವಳದ ವಸಂತಕುಮಾರ್ ಶೆಟ್ಟಿ ಕಾರಿಕಟ್ಟೆ ಉಪಸ್ಥಿತರಿದ್ದರು.

ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದ ಮಾಜಿ ಕಾರ್ಯದರ್ಶಿ ಸಂಜೀವ ಆಚಾರ್ಯ ಕಳವಾಡಿ ಸ್ವಾಗತಿಸಿದರು. ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್ ಶುಭಸಂಸನೆಗೈದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಶಿವಕುಮಾರ್ ವಂದಿಸಿದರು.
ವರದಿ/ಗಿರಿ ಶಿರೂರು