ಬೈಂದೂರು; ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜೆಸಿಐ ಶಿರೂರು ಘಟಕದ ವತಿಯಿಂದ ಶಿರೂರು ಗ್ರಾಮದ ಜಡ್ಗದ್ದೆ ನಿವಾಸಿ ಉಮೇಶ ಪೂಜಾರಿ ಇವರು ಹಲವಾರು ವರ್ಷ ದಿಂದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಹಲವು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು 20 ಬಾರಿ ರಕ್ತ ದಾನ ಮಾಡಿದ ಇವರ ಸಾಮಜಿಕ ಸೇವೆಯನ್ನು ಗುರುತಿಸಿ ಜೆಸಿಐ ಶಿರೂರು ಸಂಸ್ಥೆಯ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಜೆಸಿಐ ಶಿರೂರು ಅಧ್ಯಕ್ಷ ವಿನೋದ ಮೇಸ್ತ, ಕಾರ್ಯದರ್ಶಿ ಪವನ್ ಪೂಜಾರಿ, ಪೂರ್ವಾಧ್ಯಕ್ಷರರಾದ ಪ್ರಸಾದ್ ಪ್ರಭು, ನಾಗೇಶ್ ಕೆ, ಪ್ರಕಾಶ್ ಮಾಕೋಡಿ, ಅರುಣ್ ಕುಮಾರ್ ಶಿರೂರು, ಪಾಂಡುರಂಗ ಮೊಗೇರ್, ನಾಗೇಂದ್ರ ಪ್ರಭು,ಜೆಜೆಸಿ ಅಧ್ಯಕ್ಷ ದೇವಂದ್ರ ಪಾಟೀಲ್ ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.
