ಬೈಂದೂರು; ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಲು 64 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಸೋಮವಾರ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿವೃದ್ದಿಯ ದೃಷ್ಟಿಯಿಂದ ಬೈಂದೂರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಬೇಕಾಗಿದೆ ಆದರೆ ಗ್ರಾಮೀಣ ಭಾಗಗಳ ಸೇರ್ಪಡೆಯಿಂದಾಗಿ ಹತ್ತಾರು ಕಿ.ಮೀ ದೂರದ ಹಳ್ಳಿ ಭಾಗದ ಜನರಿಗೆ ಸಮಸ್ಯೆಯಾಗಿದೆ.ಈಗಾಗಲೇ ಬೈಂದೂರು ರೈತರ ನಿಯೋಗ ಬೇಟಿ ಮಾಡಿದ ಸಂದರ್ಭ ವಿವಿಧ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪಕ್ಷಾತೀತವಾದ ಹೋರಾಟಕ್ಕೆ ಎಲ್ಲಾ ನಾಯಕರ ಬೆಂಬಲವಿದ್ದು ಸಂಬಂಧಪಟ್ಟಇಲಾಖೆ ಜೊತೆ ಚರ್ಚಿಸಿ ರೈತರ ಪರವಾಗಿ ನಿಲ್ಲುವುದಾಗಿ ತಿಳಿಸಿದರು ಮತ್ತು ಮುಂದಿನ ಬೆಳಗಾಂ ಅಧಿವೇಶನದ ವೇಳೆ ಸರಕಾರದ ಗಮನಕ್ಕೆ ತರುವ ಭರವಸೆ ನೀಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ರೈತರ ಬೇಡಿಕೆ ನ್ಯಾಯಯುತವಾಗಿದೆ.ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ತಂದಿದ್ದು ಪ್ರಾಮಾಣಿಕವಾಗಿ ರೈತರ ಜೊತೆ ಬೆಂಬಲ ನೀಡುವುದಾಗಿ ತಿಳಿಸಿದರು.



ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಅರುಣ್ ಕುಮಾರ್ ಶಿರೂರು ವಿವಿಧ ಮುಖಂಡರು ಹಾಗೂ ರೈತರು ಹಾಜರಿದ್ದರು.
ರೈತ ಮುಖಂಡ ವೀರಭದ್ರ ಗಾಣಿಗ ಸ್ವಾಗತಿಸಿದರು.
ವರದಿ/ಚಿತ್ರ: ಗಿರಿ ಶಿರೂರು