ಬೈಂದೂರು: ರಾಹುತೇಶ್ವರ ಪ್ರೆಂಡ್ಸ್ ರಾಹುತನಕಟ್ಟೆ ಯಡ್ತರೆ ಬೈಂದೂರು ಇದರ ದಿ.ವೆಂಕಟ ಪೂಜಾರಿ ಇವರ ಸವಿನೆನಪಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ನ.22 ರಂದು ಸಂಜೆ 7 ಗಂಟೆಗೆ ಗರ್ಜಿನಹಿತ್ಲು ಮೈದಾನ ರಾಹುತನಕಟ್ಟೆ ಯಡ್ತರೆಯಲ್ಲಿ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮ,ಸಾಧಕರಿಗೆ ಸಮ್ಮಾನ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ವೈವಿದ್ಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.