ಶಿರೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಪೆಟ್ರೋಲ್ ಬಂಕ್ ಬಳಿ ಕಾರೊಂದು ಬೈಂದೂರಿನಿಂದ ಕಡೆಯಿಂದ ಭಟ್ಕಳ ಕಡೆಗೆ ಚಲಿಸುತ್ತಿರುವ ವೇಳೆ ಕಾರಿನ ಟಯರ್ ಸ್ಪೋಟಗೊಂಡು ಕಾರು ನಿಯಂತ್ರಣ ತಪ್ಪಿ ಶಿರೂರು ಪೆಟ್ರೋಲ್ ಬಂಕ್ ಬಳಿ ಭಟ್ಕಳ ಕಡೆಗೆ ಸಾಗುತ್ತಿರುವ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕನ ಕಾಲಿನ ಭಾಗಕ್ಕೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೈಂದೂರು ಆಸ್ಪತ್ರೆಗೆ ಸಾಗಿಸಲಾಗಿದ್ದು ಡಿಕ್ಕಿಯ ಅಬ್ಬರಕ್ಕೆ ರಿಕ್ಷಾ ಸಂಪೂರ್ಣ ನಜ್ಜುನಜ್ಜಾಗಿದೆ.ಬೈಂದೂರು ಆರಕ್ಷಕರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

