ಬೈಂದೂರು; ಕಳೆದ 25 ವರ್ಷಗಳಿಂದ ವಿವಿಧ ಸಾಂಸ್ಕೃತಿಕ ಕ್ಷೇತ್ರ ಹಾಗೂ ರಂಗಭೂಮಿಯಲ್ಲಿ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಬೆಳ್ಳಿ ಹಬ್ಬದ “ರಜತಯಾನ”ದ ಹೊಸ್ತಿಲಲ್ಲಿರುವ ಬೈಂದೂರಿನ ಕಲಾಭಿಮಾನಿಗಳ ಹೆಮ್ಮೆಯ ಕಲಾ ಸಂಸ್ಥೆಯಾದ “ಸುರಭಿ” ಸಂಸ್ಥೆಗೆ 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಉಡುಪಿ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಯನ್ನು ಸುರಭಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮಕೃಷ್ಣ ದೇವಾಡಿಗ ಉಪ್ಪಂದ ಇವರಿಗೆ ಕರ್ನಾಟಕ ಘನ ಸರ್ಕಾರದ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸುರೇಶ್ ಹುದಾರ್ ,ನಿರ್ದೇಶಕರಾದ ಸುಧಾಕರ ಪಿ ಬೈಂದೂರು,ಕಾರ್ಯಕಾರಿ ಸಮಿತಿಯ ಉದಯ ಕುಮಾರ್. ಗಣೇಶ್ ಪೂಜಾರಿ.ಶ್ರೀಧರ ಟೈಲರ್.ಕುಮಾರಿ ನಿಶ್ಚಿತಾ ಉಪಸ್ಥಿತರಿದ್ದರು.
