ಶಿರೂರು : ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಕ್ತಿ ಕೇಂದ್ರದ ವಾರ್ಡ್ ಸಂಖ್ಯೆ 1,2,3,4,5 ರ ವಾರ್ಡ್ ಸಭೆ ಶಿರೂರು ಆರ್‍ಮಕ್ಕಿ ರವೀಂದ್ರ ಶೆಟ್ಟಿ ಯವರ ನಿವಾಸದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘಟನಾತ್ಮಕ ವಿಚಾರಗಳ ಬಗ್ಗೆ ಶಕ್ತಿ ಕೇಂದ್ರದ ಸದಸ್ಯರೊಂದಿಗೆ ಚರ್ಚಿಸಲಾಯಿತು. ಶಿರೂರು ಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಮೊಗವೀರ ಉಪ್ಪುಂದ,ಬೈಂದೂರು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ,1ನೇ ವಾರ್ಡ್ ಅಧ್ಯಕ್ಷ ಮಂಜುನಾಥ ಪೈ,2ನೇ ವಾರ್ಡ್ ಅಧ್ಯಕ್ಷ ನಾಗರಾಜ ಪ್ರಭು,3ನೇ ವಾರ್ಡ್ ಅಧ್ಯಕ್ಷ ಅಶೋಕ ಶೆಟ್ಟಿ ಕಾರಿಕಟ್ಟೆ,4ನೇ ವಾರ್ಡ್ ಅಧ್ಯಕ್ಷ ಶೇಖರ ಆಚಾರಿ,5ನೇ ವಾರ್ಡ್ ಅಧ್ಯಕ್ಷ ಗಣಪತಿ ಬಿಲ್ಲವ ಕಾಳನಮನೆ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
