ಬೈಂದೂರು: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ ಉಡುಪಿ,ರೋಟರಿ ಕ್ಲಬ್ ಬೈಂದೂರು,ದೇವಾಡಿಗರ ಒಕ್ಕೂಟ ಬೈಂದೂರು,ವಿಶ್ವಕರ್ಮ ಯುವಕ ಮಂಡಲ ಬೈಂದೂರು,ರಕ್ತನಿಧಿ ಕೆ.ಎಂ.ಸಿ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಅ.26 ರಂದು ಪೂರ್ವಾಹ್ನ 9 ಗಂಟೆಗೆ ರೋಟರಿ ಸಮುದಾಯ ಭವನ ಬೈಂದೂರಿನಲ್ಲಿ ನಡೆಯಲಿದೆ ಎಂದು ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.