ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಿಮಕ್ಕಿ ಬಿಜೂರು ಇಲ್ಲಿಗೆ ವರಲಕ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಇದರ ವತಿಯಿಂದ ಸ್ಮಾಟ್೯ ಕ್ಲಾಸ್ ಕೊಡುಗೆಯಾಗಿ ನೀಡಲಾಯಿತು.

ವರಲಕ್ಮೀ ಚಾರಿಟೇಬಲ್ ಟ್ರಸ್ಟ್  ಉಪ್ಪುಂದ ಇದರ ಮ್ಯಾನೆಜಿಂಗ್ ಟ್ರಸ್ಟಿ ಡಾ.ಬಾಬು ಗೋವಿಂದ ಪೂಜಾರಿ ಸ್ಮಾಟ್೯ ಕ್ಲಾಸ್ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಅನ್ನುವ ಉದ್ದೇಶದಿಂದ ಸರಕಾರಿ ಶಾಲೆಗಳಿಗೆ ಸಾಲು ಸಾಲಾಗಿ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡುತ್ತಿದ್ದು ವಿದ್ಯಾರ್ಥಿಗಳು ಸ್ಮಾರ್ಟ್ ಕ್ಲಾಸ್ ಸದುಪಯೋಗಪಡಿಸಿಕೊಂಡು ಪ್ರತಿಯೊಂದು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು ಹಾಗೂ ಶಾಲಾಭಿವೃದ್ದಿ ಸಮಿತಿಯೂ ಕೂಡ ಶಾಲೆಯ ಬಗ್ಗೆ ಅಪಾರವಾದ ಅಭಿಮಾನವಿರಬೇಕು ಎಂದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುಲೋಚನಾ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಲತಿ ಗೋವಿಂದ ಪೂಜಾರಿ,ವಿಶ್ವೇಶ್ವರ ಅಡಿಗ,ನಿವೃತ್ತ ಶಿಕ್ಷಕ ಗೋಪಾಲ್ ಶೇರುಗಾರ್,ಗಿರೀಶ್ ಶಾನುಭಾಗ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ದೇವಾಡಿಗ,ಗ್ರಾ.ಪಂ ಸದಸ್ಯರಾದ ವೀರೇಂದ್ರ ಶೆಟ್ಟಿ ,ಗಿರೀಶ್ ದೇವಾಡಿಗ,ಲೋಲಾಕ್ಷಿ ದೇವಾಡಿಗ,ಲಕ್ಷ್ಮಿ ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ , ಎಸ್‌ಡಿಎಂಸಿ ಉಪಾಧ್ಯಕ್ಷೆ, ಯಶೋದಾ ದೇವಾಡಿಗ,ಚಂದ್ರ ದೇವಾಡಿಗ, ಮಂಜುನಾಥ್ ಆಚಾರ್ಯ ಉಪಸ್ಥಿತರಿದ್ದರು.

ಗಣೇಶ್ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸರೋಜಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಗುಲಾಬಿ ದೇವಾಡಿಗ ವಂದಿಸಿದರು.

Leave a Reply

Your email address will not be published. Required fields are marked *

seventeen + three =