ಬೈಂದೂರು: ಬೈಂದೂರಿನ ಇತಿಹಾಸದಲ್ಲಿ ರೈತರು ಬೀದಿಗಿಳಿದಿರುವುದು ಇದೇ ಮೊದಲ ಬಾರಿಯಾಗಿದೆ.ಪ್ರತಿದಿನ ಹೊಲ ಗದ್ದೆಗಳಲ್ಲಿ ಬದುಕಿಗಾಗಿ ದುಡಿಯುವ ರೈತರು ಇಂದು ನ್ಯಾಯಕ್ಕಾಗಿ ಧರಣಿ ಕುಳಿತಿರುವುದಕ್ಕೆ ಅಧಿಕಾರಿಗಳು ನೇರ ಕಾರಣರಾಗಿದ್ದಾರೆ.ಬೈಂದೂರಿನಲ್ಲಿ ನಡೆಯುತ್ತಿರುವ ರೈತ ಸಂಘದ ಈ ಹೋರಾಟಕ್ಕೆ ಪಕ್ಷ ಬೇದ ಮರೆತು ನಾವೆಲ್ಲರೂ ಒಂದಾಗಿ ನ್ಯಾಯ ಕೊಡಿಸಬೇಕಾಗಿದೆ.ರೈತರ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದರೆ ನಿಮ್ಮನ್ನೆ ಹೊರಗಿಡುವ ಪ್ರಮೇಯ ಬರುತ್ತದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಹೇಳಿದರು ಅವರು ಸೋಮವಾರ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದ ರೈತ ಸಂಘದ ಮುಂದಾಳತ್ವದ ರೈತರ ಅನಿಧಿ೯ಷ್ಟಾವಧಿ ಧರಣಿ ಬೆಂಬಲಿಸಿ ಮಾತನಾಡಿ ಗ್ರಾಮೀಣ ಬಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿಸಿರುವುದು ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ.ಸರಕಾರ ಆದಷ್ಟು ಶೀಘ್ರ ಇವರ ಬೇಡಿಕೆ ಈಡೇರಿಸಬೇಕು.ಇವರ ಹೋರಾಟಕ್ಕೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಪೂರ್ಣ ಬೆಂಬಲ ಇದ್ದು ರೈತರು ಬೆಂಗಳೂರಿನಲ್ಲಿ ಹೋರಾಟ ಮಾಡುವುದಿದ್ದರು ಕೂಡ ನಮ್ಮ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರು ನೇಗಿಲು, ನೊಗ ಇಟ್ಟು ಭತ್ತದ ತಿರಿ ನಿರ್ಮಿಸಿ ಇಲಾಖೆಯ ವಿರುದ್ದ ಅಸಾಮಾಧಾನ ವ್ಯಕ್ತಪಡಿಸಿದರು. ಸೋಮವಾರ ಕ್ಯಾರ್ತೂರು ಭಾಗದ ರೈತರು ಪ್ರತಿಭಟನೆ ನೇತ್ರತ್ವ ವಹಿಸಿದ್ದರು.
ಸುಧಾಕರ ಶೆಟ್ಟಿ ನೆಲ್ಯಾಡಿ, ಸುಬ್ಬಣ್ಣ ಶೆಟ್ಟಿ ಕಿರಿಮಂಜೇಶ್ವರ,ನಾರಾಯಣ ಮೊಗೇರ್ ಅಳ್ವೆಗದ್ದೆ, ಮಹಾದೇವ ಕಿಸ್ಮತ್ತಿ,ಪ್ರಶಾಂತ ಪಡುವರಿ,ಗಣಪ ಗಂಗನಾಡು,ಚಂದ್ರ ಕ್ಯಾರ್ತೂರ ಮೊದಲಾದವರು ಹಾಜರಿದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೀರಭದ್ರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.
ವರದಿ/ಗಿರಿ ಶಿರೂರು