ಬೈಂದೂರು: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಸಂಘದ ನಿರ್ದೇಶನದಂತೆ “ತಿಂಗಳ ಅಂಗಳ “ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆಯಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜೊತೆ ಸಂವಾದ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರತಿ ವ್ಯಕ್ತಿಗೂ ಜೀವನದಲ್ಲಿ ಒಂದು ಕನಸು ಸಹಜವಾಗಿರುತ್ತದೆ.ನಾನೆಂದು ಶಾಸಕನಾಗುವ ಕನಸು ಕಂಡಿಲ್ಲ.ಬದಲಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಸೇವೆ ಮಾಡುವ ಅವಕಾಶದ ತುಡಿತವಿತ್ತು.ಅ ದೇವರು ನನಗೆ ಕ್ಷೇತ್ರದ ಶಾಸಕನಾಗುವ ಅವಕಾಶ ನೀಡಿದ್ದು ಮತ್ತು ಬೈಂದೂರು ಕ್ಷೇತ್ರದ ಜನರ ಆಶೀರ್ವಾದ ಮಾಡಿರುವುದು ನನ್ನಿಂದಾದ ಜನಸೇವೆ ಮಾಡಲು ಬದುಕಿನಲ್ಲಿ ದೊರೆತ ಅವಕಾಶವಾಗಿದ ಎಂದರು.
ಶಾಸಕರ ಟ್ರೆಂಡ್ ಬದಲಿಸಿದ ಸಂತೃಪ್ತಿ: ಸಾಮಾನ್ಯವಾಗಿ ಶಾಸಕರೆಂದರೆ ಒಂದಿಷ್ಟು ಜನಸಮೂಹ,ದರ್ಪ,ದವಾಣ ಇವೆಲ್ಲಾ ಸಹಜ. ಆದರೆ ಜನಸಾಮಾನ್ಯರಿಗೆ ಜನರ ನಡುವೆ ಇರುವ ವ್ಯಕ್ತಿ ಆದಾಗ ಮಾತ್ರ ಪ್ರೀತಿ ಹೆಚ್ಚುತ್ತದೆ.ಹೀಗಾಗಿ ನಾಯಕ ಬದಲಾಗಬಹುವುದು ಆದರೆ ಕಾರ್ಯಕರ್ತ ಬದಲಾಗಲಾರ ಆದುದರಿಂದ ನಾನು ಶಾಸಕ ಅನ್ನೋದಕ್ಕಿಂತ ಜನಸೇವೆಯ ಕಾರ್ಯಕರ್ತ ಹೀಗಾಗಿ ಶಾಸಕರು ಅಂದರೆ ಹೀಗೆ ಇರಬೇಕು ಅನ್ನುವ ಟ್ರೆಂಡ್ ಬದಲಿಸಿದ್ದೇನೆ ಎಂದರು.
ವಿರೋಧಿಗಳ ಬಗ್ಗೆ ಆಕ್ಷೇಪಿಸಲಾರೆ: ಕ್ಷೇತ್ರದಲ್ಲಿ ಹತ್ತಾರು ಹೋರಾಟಗಳಾಗುತ್ತದೆ.ಕೆಲವು ಹೋರಾಟಗಳು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತದೆ.ರಾಜಕೀಯವಾಗಿ ವಿರೋಧಿಗಳು ಸಹಜ.ವಿರೋಧಿಗಳ ನಿಲುವನ್ನು ಖಂಡಿಸುವುದಿಲ್ಲ ಸ್ವೀಕರಿಸುತ್ತೇನೆ.ಬೈಂದೂರು ಕ್ಷೇತ್ರದ ಅಭಿವೃದ್ದಿಯಲ್ಲಿ ಸರಕಾರದ ಅನುದಾನಗಳಿದಾಗಿ ಸಿ.ಎಸ್.ಆರ್ ಫಂಡ್ ಮೂಲಕ ಅತ್ಯಧಿಕ ಅಭಿವೃದ್ದಿಯಾಗಿದೆ ಎಂದರು.
ಜಲಜೀವನ್ ಮಿಷನ್ ಯೋಜನೆ ಸಾಕಾರಗೊಳ್ಳುತ್ತದೆ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.ಈಗಾಗಲೇ ಜಲಜೀವನ್ ಸಮಸ್ಯೆ ಕುರಿತು 13ಕ್ಕೂ ಅಧಿಕ ಸಭೆ ನಡೆಸಲಾಗಿದೆ.ಅಧಿಕಾರಿಗಳು ಯಾವುದೇ ಕಾರಣಕ್ಕೂ ನೀರು ಪೂರೈಸದೆ ಕಾಮಗಾರಿ ಬಿಲ್ ನೀಡುವುದಿಲ್ಲ ಎಂದಿದ್ದಾರೆ.ತಾಂತ್ರಿಕ ಸಮಸ್ಯೆ ಸರಿಪಡಿಸಿ ಯೋಜನೆ ಸಾಕಾರಗೊಳ್ಳಲಿದೆ.ಇದು ಕೇಂದ್ರ ಸರಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ ಎಂದರು. ಕ್ಷೇತ್ರದ ಕನಸಿನಂತೆ ಮಾಧ್ಯಮದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಶಾಸಕರು ಕ್ರಿಯಾತ್ಮಕ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ರಾಮ ಬಿಜೂರು ಕಾರ್ಯಕ್ರಮ ನಿರೂಪಿಸಿದರು.ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉದಯ ಪಡಿಯಾರ್ ವಂದಿಸಿದರು.
ವರದಿ /ಗಿರಿ ಶಿರೂರು