ಶಿರೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಶಿರೂರು ಶಾಖೆ ಹಾಗೂ ನಬಾರ್ಡ್ ಸಹಯೋಗದೊಂದಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಾಗಾರ ಕಾರ್ಯಕ್ರಮ ಶಿರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪೈನಾನ್ಸಿಯಲ್ ಲಿಟ್ರೇಸಿ ಕೌನ್ಸಿಲ್ ಕುಂದಾಪುರದ ಆಶಾಲತಾ ಆರ್ಥಿಕ ಅರಿವು ಹಾಗೂ ಜನಸುರಕ್ಷಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ ಮೊಹಮ್ಮದ್,ಶಿರೂರು ಗ್ರಾ.ಪಂ ಅಭಿವೃದ್ದಿ ಆಧಿಕಾರಿ ರಾಜೇಂದ್ರ ಶೆಟ್ಟಿ, ಸಹಾಯಕ ಮಹಾ ಪ್ರಬಂಧಕ ಎಂ.ಮೋಹನ್ ದಾಸ್ ಹೆಬ್ಬಾರ್, ಉಪ್ಪುಂದ ಶಾಖೆಯ ಹಿರಿಯ ವ್ಯವಸ್ಥಾಪಕ ಶಂಕರ್ ಶೆಟ್ಟಿ,ಶಿರೂರು ಶಾಖೆಯ ಸಿಬ್ಬಂದಿಗಳಾದ ನಾಗರಾಜ್ ಕೊಠಾರಿ ಆಲಂದೂರು,ಪವನ್ ಕುಮಾರ್, ಶ್ರದ್ಧಾ ಮೊಗೇರ್,ನವೋದಯ ಪ್ರೇರಕಿ ವೀರಮ್ಮ ಉಪಸ್ಥಿತರಿದ್ದರು.

ಶಿರೂರು ಶಾಖಾ ಪ್ರಬಂಧಕ ರಾಜೇಶ್ ಶೇಟ್ ಸ್ವಾಗತಿಸಿದರು.ಸಂಸ್ಥೆಯ ಸಿಬ್ಬಂದಿ ದೇವೇಂದ್ರ ಮೊಗೆರ್ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಮೊಗವೀರ ಶಿರೂರು ವಂದಿಸಿದರು.