ಶಿರೂರು ; ಕಿಕ್ಕಿರಿದ ಜನಸ್ತೋಮ ಹಿರಿಯರು ವಯಸ್ಕರು ಹುಡುಗರ ಹುಮ್ಮಸ್ಸಿನ ಚೀರಾಟ ಒಂದೆರಡು ಗಂಟೆ ಜನರ ಗೌಜೆ ಗೌಜು .ಇದು ಯಾವುದೆ ಕ್ರಿಕೆಟ್ ಅಥವಾ ಕಬಡ್ಡಿ ಪಂದ್ಯಾಟದ ಸುದ್ದಿಯಲ್ಲ ಬದಲಾಗಿ ಶಿರೂರಿನ ಸೋಡಿಬೆಟ್ಟು ಎಂಬಲ್ಲಿ ಗ್ರಾಮೀಣ ಹಬ್ಬವಾದ ಹೊಸ್ತಿನ ದಿನದ ನೆನಪಿಗಾಗಿ ಮರೆಯಾದ ಗ್ರಾಮೀಣ ಕ್ರೀಡೆಗಳ ಆಯೋಜನೆಯ ಸಂಭ್ರಮವಾಗಿತ್ತು. ರೈತ ಸಂಘ ಶಿರೂರು ಇದರ ವತಿಯಿಂದ ಮರೆಯಾದ ಗ್ರಾಮೀಣ ಕ್ರೀಡೆಗಳನ್ನು ಯುವ ತಲೆಮಾರುಗಳಿಗೆ ಪರಿಚಯಸುವ ಉದ್ದೇಶದಿಂದ ಕರಾವಳಿಯಲ್ಲಿ ಗ್ರಾಮೀಣ ಕ್ರೀಡಾ ಸಂಭ್ರಮ ಆಯೋಜಿಸಲಾಗಿತ್ತು.ವಿವಿಧ ಕಡೆಯಿಂದ ನೂರಾರು ರೈತರು ಭಾಗವಹಿಸಿ ಗ್ರಾಮೀಣ ಕ್ರೀಡಾ ಸಂಭ್ರಮದಲ್ಲಿ ಸಂಭ್ರಮಿಸಿದರು.
ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಶಿರೂರು,ತಾ.ಪಂ. ಮಾಜಿ ಸದಸ್ಯ ಪುಷ್ಪರಾಜ ಶೆಟ್ಟಿ,ರೈತ ಸಂಘದ ಉಪಾಧ್ಯಕ್ಷ ವೆಂಕ್ಟು ಪೂಜಾರಿ ಕಾಳನಮನೆ,ಕಿಶೋರ ಪೂಜಾರಿ,ಕುಂದಾಪುರ ಆರಕ್ಷಕ ಇಲಾಖೆಯ ಮೋಹನ ಪೂಜಾರಿ ಶಿರೂರು,ಅರುಣ್ ಕುಮಾರ್ ಶೆಟ್ಟಿ,ರವಿ ಶೆಟ್ಟಿ ಕುದ್ರಕೋಡು,ಕೃಷ್ಣ ಬಿ.ಪಿ ಮುಂತಾದವರು ಹಾಜರಿದ್ದರು.





ಕುಸ್ತಿ,ಕಬಡ್ಡಿ,ಕುಡಿಕೆ ಒಡೆಯುವುದು,ಹಗ್ಗಜಗ್ಗಾಟ,ಕಾಯಿಕಲ್ಲು ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ನಡೆಯಿತು.
ವರದಿ/ಚಿತ್ರ: ಗಿರಿ ಶಿರೂರು