ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಯಡ್ತರೆ ಇದರ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಜೆ.ಎನ್.ಆರ್ ಯಡ್ತರೆ ಬೈಂದೂರಿನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಅಡಿಟ್ ವರ್ಗಿಕರಣದಲ್ಲಿ ಎ ಶ್ರೇಣಿ ಪಡೆದಿದೆ.ವರದಿ ವರ್ಷದಲ್ಲಿ 853.49 ಕೋಟಿಗೂ ಮೀರಿ ವ್ಯವಹಾರ ನಡೆಸಿದ್ದು ಪ್ರಸಕ್ತ ಸಾಲಿನಲ್ಲಿ ಸಂಘವು ರೂಪಾಯಿ 01.03 ಕೋಟಿ ಲಾಭಗಳಿಸಿದ್ದು ಸದಸ್ಯರಿಗೆ ಶೇ.15% ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದರು.
ನಿರ್ದೇಶಕರಾದ ಸದಾಶಿವ ಡಿ.ಪಡುವರಿ,ನಾಗರಾಜ ಶೆಟ್ಟಿ,ಚಿಕ್ಕು ಪೂಜಾರಿ ಶಿರೂರು,ವಸಂತ ಕುಮಾರ್ ಶೆಟ್ಟಿ,ಎಮ್.ಎಚ್.ಗುರುದತ್ತ,ಅರುಣ್ ಕುಮಾರ್ ಶಿರೂರು,ಹೆರಿಯ ದೇವಾಡಿಗ,ಸತೀಶ ಯಡ್ತರೆ,ಶಂಕರ ನಾಯ್ಕ,ಜ್ಯೋತಿ,ಎಚ್.ವಿಜಯಾ ಶೇರುಗಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರು ಹಾಗೂ ಸಾಧಕರನ್ನು ಸಮ್ಮಾನಿಸಲಾಯಿತು ಹಾಗೂ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಿರ್ದೇಶಕರಾದ ಸದಾಶಿವ ಡಿ.ಪಡುವರಿ ಸ್ವಾಗತಿಸಿದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕರಾದ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
News/Giri Shiruru