ಬೈಂದೂರು; ತಾಲೂಕು ಆಡಳಿತ ಬೈಂದೂರು,ಪಟ್ಟಣ ಪಂಚಾಯತ್ ಬೈಂದೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ತಾಲೂಕು ಇದರ ಆಶ್ರಯದಲ್ಲಿ ಬೈಂದೂರು ತಹಶೀಲ್ದಾರರ ಕಛೇರಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಬೈಂದೂರು ಪ್ರವಾಸಿ ಮಂದಿರದಲ್ಲಿ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ರಘು ನಾಯ್ಕ ಮಾತನಾಡಿ ಭಾಷೆ ಅನ್ನೋದು ಕೇವಲ ಸಂವಹನ ಮಾಧ್ಯಮವಷ್ಟೆ ಆಲ್ಲ ಬದಲಾಗಿ ಈ ಸಂಸ್ಕ್ರತಿ,ಪರಂಪರೆ,ಈ ನೆಲದ ಪ್ರತೀಕವಾಗಿದೆ.ನೆಲ ಜಲದ ರಕ್ಷಣೆ ಜೊತೆಗೆ ಭಾಷೆ ಉಳಿದರೆ ಮಾತ್ರ ಸಂಸ್ಕ್ರತಿ ಉಳಿಯುತ್ತದೆ ಎಂದರು.
ಬೈಂದೂರು ತಹಶೀಲ್ದಾರ ಶ್ರೀಕಾಂತ್ ಎಸ್.ಹೆಗ್ಡೆ ದ್ವಜಾರೋಹಣಗೈದು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್,ಬೈಂದೂರು ಠಾಣಾಧಿಕಾರಿ ನಿರಂಜನ್ ಗೌಡ,ಕ್ಷೇತ್ರ ಸಮನ್ವಯಾಧಿಕಾರಿ ಕರುಣಾಕರ ಶೆಟ್ಟಿ ಉಪತಹಶೀಲ್ದಾರ ಭೀಮಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಹಾಜರಿದ್ದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಜಿ.ಎಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗಣಪತಿ ಹೋಬಳಿದಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸುಧಾಕರ ಪಿ.ಬೈಂದೂರು ವಂದಿಸಿದರು.
News/pic:Girish shiruru