ಶಿರೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾದ ಸಿ.ಎನ್.ಬಿಲ್ಲವ ಇವರ ಸಮ್ಮಾನ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆ,ಶಾಲಾ ಎಸ್.ಡಿ.ಎಮ್.ಸಿ,ಹಳೆ ವಿದ್ಯಾರ್ಥಿ ಸಂಘ,ಎಸ್.ಡಿ.ಸಿ ವತಿಯಿಂದ ಹಾಗೂ ಶಾಲಾ ಶಿಕ್ಷಕ ವೃಂದದವರ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕರಾದ ಸಿ.ಎನ್.ಬಿಲ್ಲವ ರವರನ್ನು ಸಮ್ಮಾನಿಸಲಾಯಿತು.
ಶಿಕ್ಷಕ ಸಿ.ಎನ್.ಬಿಲ್ಲವ ಸಮ್ಮಾನ ಸ್ವೀಕರಿಸಿ ಮಾತನಾಡಿ ಸರಕಾರಿ ಉದ್ಯೋಗದಲ್ಲಿ ಕರ್ತವ್ಯ ನಮ್ಮ ಜವಬ್ದಾರಿಯಾಗಿದೆ.ಸೇವೆಯಲ್ಲಿನ ಕ್ರಿಯಾಶೀಲತೆ ಮತ್ತು ಒಂದಿಷ್ಟು ಹೊಸತನದ ಪರಿಕಲ್ಪನೆ ಬಾಲ್ಯದಿಂದ ಆಸಕ್ತಿದಾಯಕವಾಗಿದೆ.ಸೇವೆಯ ಜೊತೆಗಿನ ಈ ಪ್ರಯತ್ನಕ್ಕೆ ಎಲ್ಲಾ ಶಿಕ್ಷಣಾಭಿಮಾನಿಗಳು, ಸಾರ್ವಜನಿಕರು,ಶಿಕ್ಷಕರ ಪ್ರೋತ್ಸಾಹವೆ ಕಾರಣವಾಗಿದೆ.ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸೇವೆಗೆ ಸಂದ ಸಂತೃಪ್ತಿಯಾಗಿದೆ ಮತ್ತು ಇನ್ನಷ್ಟು ಜವಬ್ದಾರಿ ಹೆಚ್ಚಲಿದೆ ಎಂದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಎಸ್.ಡಿ.ಸಿ ಅಧ್ಯಕ್ಷ ಚಿಕ್ಕು ಪೂಜಾರಿ,ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ,ಪ್ರಸನ್ನ ಕುಮಾರ್ ಶೆಟ್ಟಿ,ಉಷಾ ಜನಾರ್ಧನ,ಪ್ರೇಮಾ ಮೊಗೇರ್,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಬೈಂದೂರು ಕ್ಷೇತ್ರ ಸಮನ್ವಯಾಧಿಕಾರಿ ಪ್ರದೀಪ ಶೆಟ್ಟಿ,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ನಾಗೇಶ ಮೊಗೇರ್,ಎಸ್.ಡಿ.ಸಿ ಉಪಾಧ್ಯಕ್ಷ ಅಶೋಕ ಶೆಟ್ಟಿ ಕಾರಿಕಟ್ಟೆ,ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ವಿಶ್ವನಾಥ ಹೆಗ್ಡೆ,ಸಂಪನ್ಮೂಲ ವ್ಯಕ್ತಿ ಗಣೇಶ ಪೂಜಾರಿ,ತಾಯಂದಿರ ಸಮಿತಿ ಅಧ್ಯಕ್ಷೆ ನೇತ್ರಾವತಿ ಬಿಲ್ಲವ,ಎಸ್.ಡಿ.ಎಮ್.ಸಿ ಉಪಾದ್ಯಕ್ಷೆ ದೇವಿ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು.ಶಿಕ್ಷಕ ಗೋವಿಂದ ಎಂ.ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಜಯಶ್ರೀ ದಾಸ್ ಪೈ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಲಾರೆನ್ಸ್ ಫೆರ್ನಾಂಡಿಸ್