ಬೈಂದೂರು: ಬೈಂದೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.97.93% ಫಲಿತಾಂಶ ಗಳಿಸಿದೆ.ಒಟ್ಟು 34 ಪ್ರೌಢಶಾಲೆಗಳಲ್ಲಿ 24 ಶಾಲೆ ಶೇ.100 ಫಲಿತಾಂಶ ಗಳಿಸಿದ್ದು ಶಿರೂರು ಪ್ರೌಢಶಾಲೆ 94% ಫಲಿತಾಂಶ ಗಳಿಸಿರುವುದು ತಾಲೂಕು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಅತ್ಯುತ್ತಮ ಸಾಧನೆಯಾಗಿದೆ.ಕಳೆದ ಬಾರಿಗಿಂತ ಶೇ.10 ಫಲಿತಾಂಶ ಅಧಿಕವಾಗಿದೆ.ನಾವುಂದ ಶೆ.87.5 ಹಾಗೂ ಗ್ರೇಗರಿ ಪ್ರೌಢಶಾಲೆ 90.90 ಕ್ಷೇತ್ರದ ಕನಿಷ್ಟ ಫಲಿತಾಂಶವಾಗಿದೆ.ಒಟ್ಟು 2036 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 1994 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 42 ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದಾರೆ.ಸ.ಪ.ಪೂ ಕಾಲೇಜು ಉಪ್ಪುಂದ ವಿದ್ಯಾರ್ಥಿ ಸಾನಿಧ್ಯ ಮಯ್ಯ ಹಾಗೂ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಲತಿಕಾ ಎಲ್.ಪೂಜಾರಿ 621 ಅಂಕ ಗಳಿಸಿದ್ದಾರೆ. ಸರಕಾರಿ ಪ್ರೌಢಶಾಲೆ ಮರವಂತೆಯ ಸಮನ್ವಿ ಎಸ್.ಮೊಗವೀರ,ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ದೀಪ್ತಿ ರಾಜೇಶ ಪೂಜಾರಿ ಮತ್ತು ಸಾಗರಿ ಶೆಟ್ಟಿ ತಲಾ 618 ಅಂಕಗಳಿಸುವ ಮೂಲಕ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.