ಬೈಂದೂರು; ಬೈಂದೂರು ತಾಲೂಕು ರೈತ ಸಂಘದ ಮುಂದಾಳತ್ವದಲ್ಲಿ ಬೈಂದೂರು ಪ.ಪಂ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹಿಸಿ ಸಾವಿರಾರು ರೈತರು ಜಿಕ್ಲಾಧಿಕಾರಿ ಕಛೇರಿ ಎದುರು ಶುಕ್ರವಾರ ಬ್ರಹತ್ ಪ್ರತಿಭಟನೆ ನಡೆಸಿದರು
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು ರಸ್ತೆಯಲ್ಲೆ ಕುಳಿತರು; ಬೈಂದೂರಿನಿಂದ ನೂರಕ್ಕು ಅಧಿಕ ವಾಹನಗಳಲ್ಲಿ ಸಾವಿರಾರು ರೈತರು ಉಡುಪಿಗೆ ಆಗಮಿಸಿದರು.ಹಸಿರು ಶಾಲು ಬೀಸುತ್ತ ರಸ್ತೆಯಲ್ಲೆ ಕುಳಿತು ಪ್ರತಿಭಟಿಸಿ ಘೋಷಣೆ ಕೂಗಿದರು.ನೇಗಿಲು, ನೊಗ ಹಿಡಿದು ಜಿಲ್ಲಾಧಿಕಾರಿ ಕಛೇರಿ ಎದುರು ಹಡಿಮಂಚಕ್ಕೆ ಭತ್ತ ಬಡಿಯುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.ಬಳಿಕ ಜಿಲ್ಲಾಧಿಕಾರಿ ಕಛೇರಿ ಒಳ ನುಗ್ಗುವ ಪ್ರಯತ್ನ ನಡೆಸಿದ್ದು ಪೊಲೀಸರು ಅವಕಾಶ ನೀಡಿಲ್ಲ
ಆಗ್ರಹಗಳೇನು; ಈಗಾಗಲೆ ಉಡುಪಿ ಜಿಲ್ಲಾಧಿಕಾರಿಗಳು ಆರು ತಿಂಗಳ ಹಿಂದೆ ಹಳ್ಳಿಭಾಗವನ್ನು ಕೈಬಿಟ್ಟು ಪ.ಪಂ ಮಾಡುವ ವರದಿ ವಿವರ ಸರಕಾರಕ್ಕೆ ಕಳುಹಿಸಿದ್ದರು.ಸರಕಾರದ ಮುಖ್ಯ ಕಾರ್ಯದರ್ಶಿಗಳು ಇದನ್ನು ಅಂಗಿಕರಿಸದೆ ವಾಪಾಸ್ಸು ಕಳಿಸಿರುವುದು ರೈತರನ್ನು ಕೆರಳಿಸಿದೆ.ಪ. ಪಂ ನಿರ್ಧಾರ ಹಳ್ಳಿ ಜನರ ಬದುಕನ್ನು ಬರಡಾಯಿಸಿದೆ.ರೈತರು ನಿತ್ಯ ಗೋಳಿನಲ್ಲಿ ಸಿಲುಕಿದ್ದಾರೆ.ಸರಕಾರ ಈ ಬಗ್ಗೆ ತಕ್ಷಣ ಹಳ್ಳಿಗಳನ್ನು ಕೈ ಬಿಡಬೇಕು ಇಲ್ಲವಾದರೆ ನಮ್ಮ ಪ್ರತಿಭಟನೆ ನಿರಂತರವಾಗಿರುತ್ತದೆ ಎಂದು ಬೈಂದೂರು; ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಹೇಳಿದರು
ಜಿಲ್ಲಾಧಿಕಾರಿ ಬರುವ ವರೆಗೆ ಕದಲದ ರೈತರು; ರಾಜ್ಯ ಸರಕಾರದ ಅಧಿಕಾರಿಗಳ ಮುಖ್ಯ ಸಭೆ ನಡೆಯುತ್ತಿದ್ದು ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಾಗ ಅಸಮಾಧಾನ ವ್ಯಕ್ತಪಡಿಸಿದ ರೈತರು ಜಿಲ್ಲಾಧಿಕಾರಿಗಳು ಬರುವ ವರಗೆ ಊಟ ಕೂಡ ಮಾಡುವುದಿಲ್ಲ ಮತ್ತು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.ಬಳಿಕ ಜಿಲ್ಲಾಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿ ವಾಸ್ತವಿಕತೆ ವಿವರ ಪಡೆಯಲು ಅಧಿಕಾರಿಗಳನ್ನು ಮಾಹಿತಿ ವರದಿ ಪಡೆದು ಸರಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು.

ಸ್ಥಳದಲ್ಲೆ ರೈತರಿಂದ ಊಟ ಸಿದ್ದತೆ; ಪ್ರತಿಭಟನೆ ನಿರತ ರೈತರಿಗೆ ಸ್ಥಳದಲ್ಲೆ ಗಂಜಿ ಉಪ್ಪಿನಕಾಯಿ ಗ್ರಾಮೀಣ ಶೈಲಿಯ ಊಟ ಸಿದ್ದಪಡಿಸಲಾಗಿತ್ತು.ಅತ್ಯಂತ ಶಿಸ್ತಿನಿಂದ ಪ್ರತಿಭಟನೆ ನಡೆಸಲಾಗಿತ್ತು.
ಸೋಮವಾರದಿಂದ ಬೈಂದೂರು ಆಡಳಿತ ಕಛೇರಿ ಎದುರು ಅನಿರ್ಧಾಷ್ಟವದಿ ಪ್ರತಿಭಟನೆ; ಸರಕಾರದಿಂದ ಸಮರ್ಪಕ ನಿರ್ಧಾರ ಬರುವ ವರಗೆ ರೈತ ಸಂಘ ಸೋಮುವಾರದಿಂದ ತಾಲೂಕು ಆಡಳಿತ ಕಛೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಿದೆ ಪ್ರತಿದಿನ ಒಂದೊಂದು ಹಳ್ಳಿಯ ಜನರು ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಪತ್ರಕರ್ತ ಅರುಣ ಕುಮಾರ ಶಿರೂರು ಪ್ರಾಸ್ತವಿಕ ಮಾತನಾಡಿದರು. ಮಾಜಿ ಶಾಸಕ ಕೆ ಗೋಪಾಲ ಪೂಜಾರಿ.ಜಿ ಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ,ಸನ್ನಿ ಫಾದರ್, ವೀರಭದ್ರ ಗಾಣಿಗ,ಮ್ಯಾಥ್ಯೂ, ನಾಗಪ್ಪ ಮರಾಠಿ,ಸುಭಾಶ್ ಗಂಗಾನಾಡು,ಸುಧಾಕರ ಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದರು.
ವರದಿ/ಗಿರಿ ಶಿರೂರು